ಚಿತ್ರದುರ್ಗ : ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಗಳು ಎಣ್ಣೆ ಪಾರ್ಟಿ ನಡೆಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.ಹೊಸ ಕಾರು ಖರೀದಿಸಿದ ಖುಷಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
20 ಲೀಟರ್ ವಾಟರ್ ಕ್ಯಾನ್ ನೀರಿಗೆ ಉಪನಿರ್ದೇಶಕರ ಕಾರಿನ ಚಾಲಕ ಮದ್ಯ ಬೆರೆಸಿದ್ದಾರೆ.ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಮೋಜು ಮಸ್ತಿ ಮಾಡಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
ಸಿಬ್ಬಂದಿಯೊಬ್ಬರು ಹೊಸ ಕಾರು ಖರೀದಿಸಿದ ಖುಷಿಗೆ ಪಾರ್ಟಿ ನೀಡಿದ್ದರು ಎನ್ನಲಾಗಿದೆ. ಶಿಕ್ಷಣ ಇಲಾಖೆ ಕಚೇರಿಯನ್ನೇ ಮದ್ಯದ ಪಾರ್ಟಿಗೆ ಬಳಸಿಕೊಂಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.




