ಹಿರೇಬಾಗೇವಾಡಿ: ಹೌದು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹಿರೇಬಾಗೇವಾಡಿ ಟೋಲ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲೇ ನಾಯಿಕೊಡೆಯಂತೆ ತಲೆಎತ್ತಿರುವ ಗೂಡಂಗಡಿಗಳಿಂದ ಅಪಘಾತಗಳು ಹೆಚ್ಚಳವಾಗುವ ಸಂಭವವಿದ್ದು, ಈ ಅಂಗಡಿಗಳನ್ನು ಹಿಂದಕ್ಕೆ ಸರಿಸಬೇಕು ಎಂಬ ಸಾರ್ವಜನಿಕರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ವರದಿ ತಯಾರಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯ ಸಂಗ್ರಹ ಮಾಡಿ ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಸಿ.ಪಿ.ಐ ಸುರೇಶ್ ಹೊಳೆಪ್ಪನವರ್ ಹಾಗೂ ಸರ್ವ ಸಿಬ್ಬಂದಿವರ್ಗ, ಹಿರೇಬಾಗೇವಾಡಿ ಟೋಲ್ ವ್ಯವಸ್ಥಾಪಕ ಸಿಬ್ಬಂದಿಗಳು ಜಂಟಿಯಾಗಿ ನೋಟಿಸ್ ನೀಡಿ ಮೊನ್ನೆಯಿಂದ ಸರ್ಜಿಕಲ್ ಸ್ಟ್ರೈಕ್ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ಅಪಘಾತಗಳನ್ನು ತಡೆಗಟ್ಟುವುದಕ್ಕೆ ಕ್ರಮ ಗೊಂಡಿದ್ದಾರೆ. ಒಟ್ಟಾರೆ ನಮ್ಮ ನ್ಯೂಸ್ ವರದಿಗೆ ಎಚ್ಚೆತ್ತ ಪೊಲೀಸರು ಹಾಗೂ ಟೋಲ್ ಸಿಬ್ಬಂದಿಗಳು ಹಾಗೂ ನಮ್ಮ ನ್ಯೂಸ್ ಸಮೂಹಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ವರದಿ: ಬಸವರಾಜು