ಬಿವಿ5 ನ್ಯೂಸ್ ವರದಿ ಫಲಶ್ರುತಿ/ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಿದ ಪ್ರಾಂಶುಪಾಲರು

Bharath Vaibhav
ಬಿವಿ5 ನ್ಯೂಸ್ ವರದಿ ಫಲಶ್ರುತಿ/ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಿದ ಪ್ರಾಂಶುಪಾಲರು
WhatsApp Group Join Now
Telegram Group Join Now

ತುರುವೇಕೆರೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 2023-24 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಾಲೇಜಿನ ಪ್ರಾಂಶುಪಾಲರು ವೇತನ ಪಾವತಿಸಿದ್ದಾರೆ.

ವೇತನ ನೀಡದೆ ಪ್ರಾಂಶುಪಾಲರು ಸತಾಯಿಸುತ್ತಿರುವ ಬಗ್ಗೆ ಇತ್ತೀಚೆಗೆ ಅತಿಥಿ ಉಪನ್ಯಾಸಕರು ಪತ್ರಿಕಾಗೋಷ್ಟಿ ನಡೆಸಿ, ವೇತನ ಪಾವತಿಸಿದಿದ್ದರೆ ಕಾಲೇಜಿನ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಬಿವಿ5 ನ್ಯೂಸ್ ವಾಹಿನಿಯು ಜನವರಿ 01 ರಂದು ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಸತಾಯಿಸುತ್ತಿರುವ ಪ್ರಾಂಶುಪಾಲರು :: ಶಾಸಕರ ಮಧ್ಯಪ್ರವೇಶಕ್ಕೆ ಒತ್ತಾಯ ಎಂಬ ಶೀರ್ಷಿಕೆಯಡಿ ವಿಸೃತ ವರದಿ ಮಾಡಿತ್ತು. ಈ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಶೀಘ್ರ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಅತಿಥಿ ಉಪನ್ಯಾಸಕರಿಗೆ ನೀಡಿದ್ದರು. ಅದರಂತೆ ಇಂದು ಜನವರಿ 07 ರಂದು ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿ ಮಾಡಿದ್ದಾರೆ.

ಈ ಬಗ್ಗೆ ಅತಿಥಿ ಉಪನ್ಯಾಸಕರಾದ ನಿತ್ಯಾನಂದ್, ಶೋಭಾ, ವಾಸು ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ 2023-24 ಹಾಗೂ 2024-25 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದವರಿಗೆ ವೇತನ ನೀಡದೆ ಪ್ರಾಂಶುಪಾಲರು ಸತಾಯಿಸುತ್ತಿದ್ದರು. ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ನಾವು ಪ್ರತಿಭಟನೆಯ ತೀರ್ಮಾನ ಕೈಗೊಂಡು ಮಾಧ್ಯಮದ ಮೊರೆ ಹೋದೆವು. ಬಿವಿ5 ನ್ಯೂಸ್ ವಾಹಿನಿ ನಮ್ಮ ನೋವಿಗೆ ಸ್ಪಂದಿಸಿ ವಿಸೃತ ವರದಿ ಮಾಡಿತ್ತು. ವರದಿ ಬಂದ ಕೇವಲ ಐದು ದಿನದಲ್ಲಿ ನಮ್ಮೆಲ್ಲರ ವೇತನ ಪಾವತಿಯಾಗಿ ಕಷ್ಟ ಬಗೆಹರಿದಿದೆ. ಪತ್ರಿಕೆಯ ಶಕ್ತಿ ಏನೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಸ್ಪಂದಿಸಿದ ಬಿವಿ5 ನ್ಯೂಸ್ ವಾಹಿನಿಗೆ ಹಾಗೂ ಸತಾಯಿಸಿದರೂ ಕೊನೆಗೂ ವೇತನ ಪಾವತಿಸಿದ ಪ್ರಾಂಶುಪಾಲ ಅನಂತರಾಮು ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.

 

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!