ಬೆಂಗಳೂರು : ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಆದೇಶ, ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ಶಿವಗಂಗಾ ಲೇಔಟ್ನಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಹಾಗೂ ಗ್ರೇಟರ್ ಬೆಂಗಳೂರು ಪ್ರಭಲ ಆಕಾಂಕ್ಷಿ ಅಭ್ಯರ್ಥಿ ಮಂಜುನಾಥ್ ಟ್ರಾವೆಲ್ಸ್ ಅವರ ಧರ್ಮಪತ್ನಿ ಶ್ರೀಮತಿ ಶಾರದಾಮ್ಮ ಮತ್ತು ಕಾಂಗ್ರೆಸ್ ಮುಖಂಡರು ಕೇಶವಮೂರ್ತಿ, ಸುರೇಶ್ ಗೌಡ ಮಹಿಳಾ ಪ್ರದಾನ ಕಾರ್ಯದರ್ಶಿ ಮಹಾಲಕ್ಷ್ಮಿ ಇವರುಗಳ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡವ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಮನೆ ಮನೆಗೆ ಭೇಟಿ ಮಾಡಿ ನಮ್ಮ ಮಾಜಿ ಸಚಿವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರು ಮಾಡಿರುವ ಕಾವೇರಿನ ವ್ಯವಸ್ಥೆ, ಬೀದಿದೀಪ, ಒಳಚರಂಡಿ, ಸಿಹಿ ರಸ್ತೆ, ಡಾಂಬರೀಕರಣ ಮತ್ತು ಮನೆ ಇಲ್ಲದವರಿಗೆ ಆಶ್ರಯ ನೀಡುವುದು ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ ನಮ್ಮ ಶಾಸಕ ಎಸ್ ಟಿ ಸೋಮಶೇಖರ್ ಅವರಿಗೆ ಸಲ್ಲುತ್ತದೆ. ಅವರ ಹಾದಿಯಾಗಿ ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸ ನಂಬಿಕೆ ಭರವಸೆ ಇದೆ ಎಂದು ಮಂಜುನಾಥ್ ಟ್ರಾವೆಲ್ಸ್ ಮನೆ ಮನೆಗೆ ಭೇಟಿ ನೀಡಿ ಮಾಡಿದರು.

ಸಾರ್ವಜನಿಕರು ಮಂಜುನಾಥ್ ಟ್ರಾವೆಲ್ಸ್ ಅವರು ಹಲವಾರು ವರ್ಷಗಳಿಂದ ನಮ್ಮ ವಾರ್ಡಿನಲ್ಲಿ ಬಡವರ ದೀನ ದಲಿತರ ನಿರ್ಗತಿಕ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಮತ್ತು ಜನರಿಗೆ ಏನೇ ಸಮಸ್ಯೆ ಆದರೆ ಫೊನ್ ಮಾಡಿದರೆ ತಕ್ಷಣ ಸ್ಥಳಕ್ಕೆ ಧಾವಿಸಿದ ಸಮಸ್ಯೆ ಬಗಿಹರಿಸುತ್ತಾರೆ ಅವರಿಗೆ ನಮ್ಮ ಜನಪ್ರಿಯ ಶಾಸಕ ಎಸ್ ಟಿ ಸೋಮಶೇಖರ್ ಅವರು ಮಂಜುನಾಥ್ ಟ್ರಾವೆಲ್ಸ್ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಸಾರ್ವಜನಿಕ ಮಹಿಳೆಯರು ಪುರುಷರು ಮಾದ್ಯಮ ಮುಂದೆ ಮಾತನಾಡಿದರು.
ಶಿವಗಂಗಾ ಲೇಔಟಿನ ನಿವಾಸಿಗಳಾದ ಹನುಮಕ್ಕ, ತೇಜುಗೌಡ ಮತ್ತು ನಾಗೇಂದ್ರ ಇವರು ಮಾತನಾಡಿದರು.
ವರದಿ: ಅಯ್ಯಣ್ಣ ಮಾಸ್ಟರ್




