Ad imageAd image

ಬೆಳಗಾವಿ ಅಧಿವೇಶನದಲ್ಲಿ 9 ಮಸೂದೆ ಮಂಡಿಸಲು ಸಂಪುಟ ಅನುಮೋದನೆ 

Bharath Vaibhav
ಬೆಳಗಾವಿ ಅಧಿವೇಶನದಲ್ಲಿ 9 ಮಸೂದೆ ಮಂಡಿಸಲು ಸಂಪುಟ ಅನುಮೋದನೆ 
siddaramaiah
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 9 ಮಸೂದೆ ಮಂಡಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವ ಹೆಚ್​.ಕೆ.ಪಾಟೀಲ್ ಅವರು ಮಾಹಿತಿ ನೀಡಿದರು.

ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಮಾಹಿತಿ ನೀಡಿದ ಅವರು, ಕಾರ್ಮಿಕರ ಕಲ್ಯಾಣ ತಿದ್ದುಪಡಿ ವಿಧೇಯಕ-2024, ಅಂತರ್ಜಲ ನಿಯಮಾವಳಿ ಅಭಿವೃದ್ಧಿ ನಿರ್ವಹಣಾ ತಿದ್ದುಪಡಿ, ಚಾಣಕ್ಯ ವಿಶ್ವ ವಿದ್ಯಾಲಯ ತಿದ್ದುಪಡಿ ವಿಧೇಯಕ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಯೂನಿವರ್ಸಿಟಿ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ ಎಂದರು.

ವಿವಿಗೆ ಸಂಬಂಧಿಸಿ ಇಷ್ಟು ದಿನ ರಾಜ್ಯಪಾಲರು ಚಾನ್ಸಲರ್ ಆಗಿದ್ದರು. ಇನ್ಮುಂದೆ ಮುಖ್ಯಮಂತ್ರಿ ಅವರೇ ಚಾನ್ಸಲರ್ ಆಗಲಿದ್ದಾರೆ. ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಸಚಿವ ಸಂಪುಟ ಸಭೆ ಹಿಂಪಡೆದು ಈ ಅಧಿಕಾರ ಸಿಎಂಗೆ ವಹಿಸಲು ನಿರ್ಧರಿಸಿದೆ.

ಅದೇ ರೀತಿ ಅಂತರ್ಜಲ ನಿಯಮಾವಳಿ ಅಭಿವೃದ್ಧಿ ನಿರ್ವಹಣಾ ತಿದ್ದುಪಡಿಗೆ ಸಂಬಂಧಿಸಿ ಕೊಳವೆಬಾವಿ ನಿಷ್ಕ್ರಿಯ ಆಗಿದ್ದರೆ, ಮುಚ್ಚುವುದು ಕಡ್ಡಾಯ. ಮುಚ್ಚದಿದ್ದಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಇರಲಿದೆ ಎಂದು ಪಾಟೀಲರು ಹೇಳಿದರು.

ಬಿಬಿಎಂಪಿ 2ನೇ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೊಟೇಲ್ ನ ನಿರ್ವಹಣೆ, ಕಾರ್ಯಾಚರಣೆ ನಿರ್ವಹಣೆ ದುರಸ್ಥಿ ನವೀಕರಣ, ಪಾರಂಪರಿಕ ಕಟ್ಟಡ ಸಂರಕ್ಷಸಿ ಹೆರಿಟೇಜ್ ಮಾನದಂಡ ಪ್ರಕಾರ ಮಾಡಲು ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಪಿಎಂ-ಭೀಮ್ ಯೋಜನೆಯಡಿ ಅನುಮೋದಿತವಾಗಿರುವ ಒಟ್ಟು ರೂ.108.36 ಕೋಟಿಗಳ ವೆಚ್ಚದಲ್ಲಿ (ಆವರ್ತಕ ವೆಚ್ಚ ವರ್ಷಕ್ಕೆ ರೂ. 98.59 ಕೋಟೆಗಳು ಮತ್ತು ಅನಾವರ್ತಕ ವೆಚ್ಚ ರೂ. 9.76 ಕೋಟಿಗಳು) ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ – ನಮ್ಮ ಕ್ಲಿನಿಕ್ ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸದಾಶಿವಪುರ (ಉಜ್ಜಿನಿಪುರ) ಮೆತು ಕೂಲಂಬಿ ಕೆರೆ ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಗೆ ವಹಿಸಲು ಮಾಡಿರುವ ಶಿಫಾರಸ್ಸನ್ನು ಕೈಬಿಡುವ ನಿರ್ಧಾರ, ಅಧಿಕಾರಿಗೆ ಸಂಪುಟ ಸಭೆ ಎಚ್ಚರಿಕೆ ನೀಡಿದೆ.

ರಾಯಚೂರು ಜಿಲ್ಲೆಯ ಯರಮರಸ್ ಗ್ರಾಮದ “ಗೋಮಾಳ” ಜಮೀನನ್ನು ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಇವರಿಗೆ ಮಂಜೂರು ಮಾಡಲಾಗಿದೆ.

ವಾಹನ ನೋಂದಣಿ ಪ್ರಮಾಣ ಪತ್ರ (Registration Certificate) ಅನುಜ್ಞಾ ಪತ್ರ (Driving License) ನೀಡುವ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ, ಮೈಸೂರಿನ ಕೆ.ಆರ್. ನಗರ ತಾಲ್ಲೂಕು, ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ. 25.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.

Asian Development Bank ರೂ. 2500 ಕೋಟಿಗಳ ಬಾಹ್ಯ ನಿಧಿ ಸಹಯೋಗದೊಂದಿಗೆ ಜುಲೈ 2025 ರಿಂದ ಜೂನ್ 2029 ರವರೆಗೆ 4 ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿರುವ ವರ್ಷಗಳ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉಪಕ್ರಮವನ್ನು ಜಾರಿಗೊಳಿಸುವ ಬಗ್ಗೆ ಅನುಮೋದನೆ ನೀಡಲಾಗಿದೆ.

ಅದೇ ರೀತಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ “ಸ್ವದೇಶ್ ದರ್ಶನ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಮೈಸೂರಿನಲ್ಲಿ Ecological Experience Zone ಅಭಿವೃದ್ಧಿಪಡಿಸಲು (ಶೇ.100 ರಷ್ಟು ಕೇಂದ್ರ ಸಹಾಯಧನ) ಯೋಜನೆಯ ಅನುಷ್ಟಾನಕ್ಕಾಗಿ ರೂ.18.47 ಕೋಟಿಗಳ ಮೊತ್ತದ ಟೆಂಡರ್ ಅನ್ನು ರಾಜ್ಯ ಅನುಷ್ಟಾನ ಸಂಸ್ಥೆಯಾದ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ (ಕೆ.ಟಿ.ಐ.ಎಲ್) ಕರೆಯುವ ಬಗ್ಗೆ

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ “ಸ್ವದೇಶ್ ದರ್ಶನ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಹಂಪಿಯಲ್ಲಿ Travellers. Nook ಅಭಿವೃದ್ಧಿಪಡಿಸಲು (ಶೇಕಡಾ 100% ರಷ್ಟು ಕೇಂದ್ರ ಸಹಾಯಧನ) ಯೋಜನೆಯ ಅನುಷ್ಟಾನಕ್ಕಾಗಿ 2.25.63 ಮೊತ್ತದ ತದ ಟೆಂಡರ್ ಅನ್ನು ರಾಜ್ಯ ಅನುಷ್ಟಾನ ಸಂಸ್ಥೆಯಾದ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ ಅನುಷ್ಟಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!