ಶಹಪುರ: ಬಹು ದಿನಗಳ ದಲಿತ ಪರ ಸಂಘಟನೆಗಳು ಹೋರಾಟದ ಫಲವಾಗಿ ಇಂದು ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಜಾಗದಲ್ಲಿ ಅಂಬೇಡ್ಕರ್ ನಾ ಫಲಕ ಹಾಕಲಾಗಿದ್ದು ಇಂದು ಸಚಿವ ಸಂಪುಟ ಮಹತ್ವದ ನಿರ್ಣಯ ತೆಗೆದುಕೊಂಡು ಒಪ್ಪಿಗೆ ನೀಡಿರುವುದು ತುಂಬಾ ಸಂತೋಷ ತಂದಿದೆ ಸ್ಥಳೀಯ ಶಾಸಕರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರವರ ಅವರ ಸತತ ಪ್ರಯತ್ನದಿಂದ ಸಮಾಜ ಕಲ್ಯಾಣ ಸಚಿವರಾದ ಎಚ್ ಸಿ ಮಾದೇವಪ್ಪ ಅವರ ಪ್ರಯತ್ನದಿಂದ ಇಂದು ನಡೆದ ಸಚಿವ ಸಂಪುಟದಲ್ಲಿ ಸವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಿರುವುದರಿಂದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೂ ಅಭಿನಂದನೆಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೂ ಮಹತ್ವದ ನಿರ್ಣಯ ಕೈಗೊಂಡು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿರುವ ದಲಿತ ಮುಖಂಡ ನೀಲಕಂಠ ಬಡಿಗೇರ ಹಾಗೂ ಮಲ್ಲಿಕಾರ್ಜುನ ಪೂಜಾರಿಯವರು ಮಾತನಾಡಿದರು ಶಾಂತಪ್ಪ ಗುತ್ತೇದಾರ್ ರುದ್ರಪ್ಪ ಹುಲಿಮನಿ ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮಿ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ್ ಅವರಿಗೆ ಮಾಧ್ಯಮದ ಮುಖಾಂತರ ಅಭಿನಂದನೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ನಾಗಣ್ಣ ಬಡಿಗೇರ್ ನಗರ ಸಭೆ oಸದಸ್ಯರಾದ ಶಿವಕುಮಾರ್ ತಳವಾರ್ ಶರಣು ಗದಗಿ ಗಿರಿಯಪ್ಪ ಗೌಡ ಬಾಣತಿಹಾಳ್ ಗೌಡಪ್ಪಗೌಡ ಹಾಲ್ದಳ್ ಇತರರು ಇದ್ದರು ಸಿಹಿ ಅಂಚಿ ಸಂಭ್ರಮಾಚರಣೆ ಮಾಡಿದರು
ವರದಿ ವೆಂಕಟೇಶ್ ಆಲೂರು




