ಸಿರುಗುಪ್ಪ : ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣ ಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಗಳ ಸಹಯೋಗದಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ಜನ ಜಾಗೃತಿಯ ಜಾಥಾ ಕಾರ್ಯಕ್ರಮಕ್ಕೆ ಮುಖ್ಯ ವೈದ್ಯಾಧಿಕಾರಿ ಡಾ.ವಿವೇಕಾನಂದ ಅವರು ಚಾಲನೆ ನೀಡಿದರು.
ನಂತರ ಮಾತನಾಡಿ ಕ್ಯಾನ್ಸರ್ಗೆ ಕಾರಣವಾಗುವ ದು:ಶ್ಚಟಗಳಾದ ಮದ್ಯಪಾನ, ಬೀಡಿ, ಸೀಗರೇಟ್, ತಂಬಾಕು ಸೇವೆನೆಗಳಿಂದಾಗುವ ತೊಂದರೆ ಮತ್ತು ಪರಿಸರ ಮಾಲಿನ್ಯದಿಂದಾಗುವ ತೊಂದರೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಮಕ್ಕಳಾದ ನೀವು ನಿಮ್ಮ ಮನೆಯಲ್ಲಿ ಹಿರಿಯರು ದು:ಶ್ಚಟಗಳಿಗೆ ದಾಸರಾಗಿದ್ದಲ್ಲಿ ಹಿರಿಯರಿಗೆ ಅವರಿಗೆ ಕ್ಯಾನ್ಸರ್ನಿಂದಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕ್ಯಾನ್ಸರ್ ತಡೆಗಟ್ಟುವ ಕಾರ್ಯಕ್ಕೆ ವಿದ್ಯಾರ್ಥಿಗಳು ಸಹ ಕೈಜೋಡಿಸಬೇಕೆಂದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ಮಹಾತ್ಮ ಗಾಂಧೀಜಿ ವೃತ್ತದವರೆಗೆ ನಡೆದ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.
ಇದೇ ವೇಳೆ ವೈದ್ಯರಾದ ಡಾ.ನಾಗರಾಜ್, ಡಾ.ಪವನ್ಕುಮಾರ್, ಡಾ.ಇರ್ಫಾನ್, ಡಾ.ಅನಿಲ್ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜರೆಡ್ಡಿ, ದೈಹಿಕ ಶಿಕ್ಷಕ ಬಿ.ಈರಣ್ಣ, ಎನ್.ಸಿ.ಡಿ.ಸಿ ಐ.ಸಿ.ಟಿ.ಸಿ, ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರಾದ ಮಲ್ಲೇಶಿ, ಪ್ರವೀಣ್, ಮಂಜುನಾಯ್ಕ್, ಇನ್ನಿತರ ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




