ಕಲಘಟಗಿ : ಕಲಘಟಗಿ ಕಡೆಯಿಂದ ಧಾರವಾಡಕ್ಕೆ ಹೊರಟಿದ್ದ ಎರ್ಟಿಗಾ ಕಾರು ಕೆ. ೧೭ ಎನ್ ೮೫೬೧ ವೇಗವಾಗಿ ಓಡಿಸಿದ್ದರ ಪರಿಣಾಮವಾಗಿ ಮರಕ್ಕೆ ಡಿಕ್ಕಿ ಹೋಡೆದು ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಜರುಗಿದೆ.
ಕಾರನ್ನು ಧಾರವಾಡದ ಮದಿಹಾಳದ ಅರುಣಸಿಂಗ್ ಭರತಸಿಂಗ್ ಹಜಾರೆ ಚಲಾಯಿಸಿದ್ದು ವೇಗವಾಗಿ ಓಡಿಸಿದ್ದ ಪರಿಣಾಮ ಧಾರವಾಡ ಕ್ರಾಸ ಹಿರೆಹೊನ್ನಿಹಳ್ಳಿ ಗ್ರಾಮದ ಹತ್ತಿರ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ರಾಜು ಸುಭಾಶ ಬೆಂಡಿಗೇರಿ, ವಿನೋದ ಕಲ್ಲಪ್ಪ ತರಲಗಟ್ಟ, ವಿಜಯಕುಮಾರ ವೇಂಕಟೇಶ ಗೊಟಗೂರ, ಅಬ್ದುಲಖಾದರ ಪೀರಸಾಭ್ ಜಮಖಾನದಾರ ಗಾಯಾಳುಗಳಾಗಿದ್ದು ಸುಶಿಲೇಂದರ ಲಕ್ಷ್ಮಣರಾವ್ ದೇಶಪಾಂಡೆ ಮೃತ ದುರ್ದೈವಿಯಾಗಿದ್ದು ಪ್ರಕರಣ ಸ್ಥಳೀಯ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದು ಸಿ.ಪಿ.ಐ ಶ್ರೀಶೈಲ ಕೌಜಲಗಿ ತನಿಖೆ ಕೈಗೊಂಡಿದ್ದಾರೆ.