Ad imageAd image

ಡಿಕ್ಟೋ ಅಸಲಿ 500 ರೂ. ನೋಟಿನ ತರವೇ ನಕಲಿ ನೋಟು: ನಾಗರಿಕರು ಎಚ್ಚರ ವಹಿಸಿ

Bharath Vaibhav
ಡಿಕ್ಟೋ ಅಸಲಿ 500 ರೂ. ನೋಟಿನ ತರವೇ ನಕಲಿ ನೋಟು: ನಾಗರಿಕರು ಎಚ್ಚರ ವಹಿಸಿ
WhatsApp Group Join Now
Telegram Group Join Now

ನಿಮ್ಮ ಕೈಯಲ್ಲಿರುವ 500 ರೂಪಾಯಿ ನೋಟು ಅಸಲಿಯಾ? ಅಥವಾ ನಕಲಿಯಾ? ಎಂದು ನಿಮಗೆ ಯಾರಾದರೂ ಪ್ರಶ್ನಿಸಿದರೆ ಏನು ಮಾಡುತ್ತೀರಿ?. ಸೂರ್ಯನ ಬೆಳಕಿಗೆ ನೋಟನ್ನು ಹಿಡಿದು ಅದರ ಮೇಲಿನ ಚಿಹ್ನೆಗಳನ್ನು ಪರಿಶೀಲಿಸುತ್ತೀರಿ ಅಲ್ಲವೇ. ಆದರೆ, ಅಂತಹ ಚಿಹ್ನೆಗಳನ್ನೂ ಸಹ ನಕಲು ಮಾಡಿ, ಗುರುತಿಸಲು ಸಾಧ್ಯವಾಗದಂತೆ ತಯಾರಿಸಲಾದ ನಕಲಿ ನೋಟುಗಳು ಅಪಾರ ಪ್ರಮಾಣದಲ್ಲಿ ಚಲಾವಣೆಗೆ ಬಂದಿವೆ. ಅವು ಅಸಲಿ ನೋಟಗಳಾ ಎಂದು ಗುರುತಿಸುವುದು ತುಂಬಾ ಕಷ್ಟ. ಇದು ಯಾರೋ ಹೇಳಿದ ಮಾತಲ್ಲ, ಬದಲಾಗಿ ಕೇಂದ್ರ ಗೃಹ ಸಚಿವಾಲಯವೇ ನೀಡಿರುವ ಎಚ್ಚರಿಕೆ.

ಹಿಂದೆ, ನಕಲಿ ನೋಟುಗಳನ್ನು ಪತ್ತೆಹಚ್ಚುವುದು ಸುಲಭವಾಗಿತ್ತು. ಕರೆನ್ಸಿ ನೋಟಿನ ಮೇಲೆ ಹಲವು ಕಡೆ ಚಿಹ್ನೆಗಳು ಇದ್ದವು. ಅವುಗಳನ್ನು ನಕಲು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ನಕಲಿ ನೋಟು ಎಂದು ಗೊತ್ತಾಗುತ್ತಿತ್ತು. ಆದರೆ, ಈಗ ಆ ರೀತಿ ನಕಲಿ ನೋಟುಗಳನ್ನು ಪತ್ತೆ ಮಾಡುಲು ಸಾಧ್ಯವಿಲ್ಲ.

ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ನೋಟುಗಳಿಗೆ ಕಡಿಮೆ ಇಲ್ಲದಂತೆ ನಕಲಿ ನೋಟುಗಳನ್ನು ವಂಚಕರು ಮುದ್ರಿಸುತ್ತಿದ್ದಾರಂತೆ. ಒರಿಜಿನಲ್​ ನೋಟಿನ ಮೇಲಿರುವ ಎಲ್ಲಾ ಚಿಹ್ನೆಗಳು ಈ ನಕಲಿ ನೋಟುಗಳ ಮೇಲೂ ಇವೆ. ಹೀಗಾಗಿ ಸಾಮಾನ್ಯ ಜನರಿಗೆ ಅಸಲಿ ಮತ್ತು ನಕಲಿ ನೋಟಿನ ನಡುವಿನ ವ್ಯತ್ಯಾಸ ಗುರುತಿಸಲು ಅಸಾಧ್ಯವಾಗಿಸಿದೆ ಮತ್ತು ಪ್ರಜ್ಞಾವಂತರಿಗೂ ನಕಲಿ ನೋಟು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಸಿಬಿಐ, ಸೆಬಿಗೂ ಗೃಹ ಇಲಾಖೆ ಸೂಚನೆಹೀಗಾಗಿ ಕೇಂದ್ರ ಗೃಹ ಸಚಿವಾಲ ಎಚ್ಚೆತ್ತುಕೊಂಡಿದೆ. ಜನರು 500 ರೂಪಾಯಿ ನೋಟಿನ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದೆ. ನಕಲಿ ನೋಟುಗಳ ಬಗ್ಗೆ ಗಮನ ಹರಿಸುವಂತೆ ಸಿಬಿಐ, ಸೆಬಿ, ಎನ್‌ಐಎ, ಎಫ್‌ಐಯು ಮತ್ತು ಡಿಆರ್‌ಐಗೆ ಸೂಚಿಸಿದೆ. “ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ನಕಲಿ ನೋಟುಗಳ ಮುದ್ರಣ ಉತ್ತಮ ಗುಣಮಟ್ಟದ್ದಾಗಿದೆ. ಅವುಗಳಲ್ಲಿ ಹೆಚ್ಚಿನವು ಒರಿಜಿನಲ್​ ನೋಟುಗಳಂತೆಯೇ ಕಾಣುತ್ತವೆ. ಅವುಗಳನ್ನು ಗುರುತಿಸುವುದು ತುಂಬಾ ಕಷ್ಟ” ಎಂದು ಹೇಳಿದೆ.

ಅಸಲಿ ಮತ್ತು ನಕಲಿ ನಡುವೆ ವ್ಯತ್ಯಾಸ ಇಷ್ಟೇ: ವಂಚಕರು ನೋಟು ತಯಾರಿಸುವಾಗ ಸಣ್ಣ ತಪ್ಪು ಮಾಡಿದ್ದಾರೆ, ಅದನ್ನು ಪತ್ತೆ ಮಾಡಿದರೆ ಮಾತ್ರ ಅದು ನಕಲಿ ನೋಟು ಎಂದು ಪತ್ತೆಹಚ್ಚಲು ಸಾಧ್ಯ ಎಂದು ಗೃಹ ಸಚಿವಾಲಯ ತಿಳಿಸಿದೆ. ನಕಲಿ ನೋಟಿನ ಮೇಲೆ ಸಣ್ಣ ಕಾಗುಣಿತ ದೋಷ ಇದೆ ಎಂದು ಹೇಳಿದೆ. “RESERVE BANK OF INDIA” ಎಂಬ ಪದದಲ್ಲಿ ತಪ್ಪಿದೆ. “RESERVE” ಪದದಲ್ಲಿನ “E” ಅಕ್ಷರದ ಬದಲು ನಕಲಿ ನೋಟಿನಲ್ಲಿ “A” ಅಕ್ಷರ ಬಳಸಲಾಗಿದೆ. ಈ ವ್ಯತ್ಯಾಸವನ್ನು ಗುರುತಿಸುವುದರಿಂದ ಮಾತ್ರವೇ ನಕಲಿ ನೋಟನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಹೇಳಿದೆ. ಈ ಸಣ್ಣ ತಪ್ಪನ್ನು ಗಮನಿಸಲು, ಪ್ರತಿ 500 ರೂಪಾಯಿ ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದೆ.

ದೇಶದ ಆರ್ಥಿಕತೆಗೆ ಅಪಾಯ: ನಕಲಿ ನೋಟುಗಳ ಚಲಾವಣೆ ದೇಶದ ಆರ್ಥಿಕತೆಗೆ ದೊಡ್ಡ ಅಪಾಯವಾಗಿದೆ ಎಂದು ನಕಲಿ ನೋಟು ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು, ವ್ಯಾಪಾರಿಗಳು ಈ ಬಗ್ಗೆ ಜಾಗರೂಕರಾಗಿರಬೇಕು. ಮಾರುಕಟ್ಟೆಯಲ್ಲಿ ನಕಲಿ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವು ಎಷ್ಟು ಮೌಲ್ಯದಲ್ಲಿವೆ ಎಂದು ಪತ್ತೆ ಮಾಡುವುದು ಕಷ್ಟ. ಹಾಗಾಗಿ, ನೀವು 500 ರೂ ನೋಟುಗಳನ್ನು ಸ್ವೀಕರಿಸುವ ಮುನ್ನ ಸೂಕ್ಷ್ಮವಾಗಿ ಪರಿಶೀಲಿಸುವುದನ್ನು ಮರೆಯದಿರಿ ಎಂದು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!