———————————-ಮೊಳಕಾಲ್ಮೂರು ಪಟ್ಟಣದ ಚರಂಡಿ
ಮೊಳಕಾಲ್ಮುರು: ಚರಂಡಿಯ ಸ್ಲಾಬ್ ಕುಸಿದು ಟ್ರ್ಯಾಕ್ಟರ್ ಸಿಲುಕಿಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ 2:30ರ ಸಮಯದಲ್ಲಿ ಮೊಳಕಾಲ್ಮುರು ಪಟ್ಟಣದಲ್ಲಿ ನಡೆದಿದೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಈ ಘಟನೆ ನಡೆದಿದೆ, ಸ್ಲಾಬ್ ಮೇಲೆ ಮಣ್ಣು ಹೊತ್ತ ಟ್ರ್ಯಾಕ್ಟರ್ ಚಲಿಸಿದ್ದೆ ಈ ಘಟನೆಗೆ ಕಾರಣವಾಗಿದೆ,ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಗೆ ಟ್ರ್ಯಾಕ್ಟರ್ ನಲ್ಲಿ ಮಣ್ಣು ತರುತ್ತಿರುವಾಗ ಚರಂಡಿ ಮೇಲಿನಿ ಸ್ಲಾಬ್ ಕುಸಿದು ಬಿದ್ದಿದೆ ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ ಆದ್ರೆ ಚರಂಡಿಯಲ್ಲಿ ಸಿಲುಕಿಕೊಂಡು ಟ್ರ್ಯಾಕ್ಟರ್ ಅನ್ನು ಹೊರ ತೆಗೆಯಲು ಜೆಸಿಬಿಯಿಂದ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು.

ಕೇವಲ ಮೂರು ವರ್ಷದ ಹಿಂದೆ ನಿರ್ಮಾಣವಾದ ಹೆದ್ದಾರಿಯ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸಲಾಗಿತ್ತು,ಕಾಮಗಾರಿಯ ಆರಂಭದಿಂದಲೂ ಕಳಪೆ ಗುಣಮಟ್ಟದಲ್ಲಿ ಚರಂಡಿ ನಿರ್ಮಿಸಲಾಗಿದೆ, ಎನ್ನುವ ಮಾತುಗಳು ಕೇಳಿ ಬಂದಿತ್ತು ಆದ್ರೆ ಇದೀಗ ಒಂದು ಟ್ರ್ಯಾಕ್ಟರ್ ಸ್ಲಾಬ್ ಹೋದಾಗ ಸ್ಲಾಬ್ ಕುಸಿದು ಬಿದ್ದಿರುವುದು ಕಾಮಗಾರಿ ಗುಣಮಟ್ಟವನ್ನು ಪ್ರಶ್ನಿಸುವಾಂತಾಗಿದೆ.
ಅದೇ ರೀತಿ ಮುಖ್ಯ ರಸ್ತೆಯ ಕಳಪೆ ಕಾಮಗಾರಿಯು ಎದ್ದು ಕಾಣುತ್ತಿದೆ ಕೇವಲ ಮೂರು ವರ್ಷಕ್ಕೆ ರೋಡ್ ಪಕ್ಕದ ಡಿವೈಡರ್ ಗಳು ಎಲ್ಲೆಂದರಲ್ಲಿ ಕಿತ್ತು ಹೋಗಿರುವುದು ರಸ್ತೆ ಮಧ್ಯೆ ಹಾಕಿರುವ ಡಿವಡರ್ ಕೂಡ ಕೆಲವು ಕಡೆ ಕಿತ್ತು ಹೋಗಿರುವುದು ಈ ಕಾಮಾರಿಗೆ ಮೆಂಟೇನೆನ್ಸ್ ಇಲ್ಲದೆ ಹದೋ ಹದಗೆಟ್ಟು ಹೋಗಿದೆ ಪಟ್ಟಣ ಪಂಚಾಯಿತಿ ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವಂತೆ ಪಟ್ಟಣದ ತುಂಬೆಲ್ಲ ನೀರಿನ ಪೈಪ್ ಲೈನ್ ಹೊಡೆದಿದೆ ಸಾರ್ವಜನಿಕರು ತಮ್ಮ ತಮ್ಮ ವಾಟ್ಸಪ್ ಗಳಲ್ಲಿ ಹಾಕುವಂತಹ ಸ್ಥಿತಿ ಒದೆಗೆ ಬಂದಿದೆ.
ವರದಿ: ಪಿಎಂ ಗಂಗಾಧರ




