ಗದಗ : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಪಾಯ ತೆಗೆಯುವಾಗ ಸುಮಾರು 850ಕ್ಕೂ ಹೆಚ್ಚು ಗ್ರಾಂ ನಿಧಿ ದೊರೆತಿದ್ದು, ಅದನ್ನು ಈಗಾಗಲೇ ಸರ್ಕಾರಕ್ಕೂ ಕೂಡ ಒಪ್ಪಿಸಲಾಗಿದೆ. ಇದೀಗ ಲಕ್ಕುಂಡಿಯಲ್ಲಿ ನಿಧಿ ದೊರೆತ ಬೆನ್ನೆಲೆ ರಾಜ್ಯ ಸರ್ಕಾರ ಗ್ರಾಮದಲ್ಲಿ ಉತ್ಖನನ ನಡೆಸಲು ನಿರ್ಧರಿಸಲಾಗಿದೆ.
ನಿಧಿ ಪತ್ತೆಯಾದ ಬೆನ್ನಲ್ಲೇ ಇದೀಗ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿ ಉತ್ಖನನಕ್ಕೆ ಪ್ಲಾನ್ ಮಾಡಲಾಗಿದೆ.
ಇಂದಿನಿಂದ ಲಕ್ಕುಂಡಿಯಲ್ಲಿ ಉತ್ಖನನ ಆರಂಭ ಆಗಲಿದೆ. ಲಕ್ಕುಂಡಿಯಲಿ ಈಗಾಗಲೇ 2024ರ ನವೆಂಬರ್ ತಿಂಗಳಿನಲ್ಲಿ ನಡೆದ ಅನ್ವೇಷಣೆಯಲ್ಲಿ ಸಾವಿರಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದವು.
ಈಗ ನಿಧಿ ಪತ್ತೆಯಾಗಿದೆ. ಅನೇಕ ಭಾಗಗಳಲ್ಲಿ ನೀಲಮಣಿ, ಮುತ್ತು, ರತ್ನ, ಹವಳ, ವಜ್ರ, ವೈಡೂರ್ಯದಂತಹ ಅನೇಕ ವಸ್ತುಗಳು ಇಂದಿಗೂ ದೊರೆಯುತ್ತಿವೆ.ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಅಂದಾಜು 5,388 ಚದರ ಅಡಿ ವ್ಯಾಪ್ತಿಯಲ್ಲಿ ಉತ್ಪನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.




