Ad imageAd image

ಸವದತ್ತಿ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣ್

Bharath Vaibhav
ಸವದತ್ತಿ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣ್
WhatsApp Group Join Now
Telegram Group Join Now

ಬೆಳಗಾವಿ: ಜಿಲ್ಲೆಯ ಸವದತ್ತಿ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣ 164/24 ರಲ್ಲಿ ನಮೊದಿತ 7ಜನ ಅಪಾದಿತರನ್ನು ಕೂಡಲೆ ಬಂಧಿಸುವ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ‌ ಕಠಿಣ ಶಿಕ್ಷೆ ಆಗುವ ರೀತಿಯಲ್ಲಿ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಆಗ್ರಹಿಸಿದ್ದಾರೆ.

ನಗರದಲ್ಲಿರುವ ಪೋಲಿಸ್ ಭವನಕ್ಕೆ ಬುಧವಾರ ಬಿಜೆಪಿ ನಿಯೋಗ ತೆರಳಿ ಮನವಿ ನೀಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ಪತ್ರಿಕೆಯೊಂದಿಗೆ ಮಾತನಾಡಿ,  ಸವದತ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುನವಳ್ಳಿ ಪಟ್ಟಣದಲ್ಲಿ ನಡೆದ ಲವ್ ಜೀಹಾದ ಪ್ರಕರಣದಲ್ಲಿ ದಲಿತ ಮಹಿಳೆಗೆ ಎಸಗಿರುವ ಗುರುತರವಾದ ಪ್ರಕರಣವನ್ನು ಪೋಲಿಸ್ ಇಲಾಖೆಯಿಂದ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಲವ್ ಜೀಹಾದ್ ಮತಾತಂರ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮೊಸ, ವಂಚನೆ, ಜಾತಿ ನಿಂದನೆ, ಗೂಂಡಾಗಿರಿ ಹಾಗೂ ಇನ್ನು ಅನೇಕ ತೆರನಾದ ಅಪರಾಧವನ್ನು ಎಸಗಿದ ಅಪರಾಧಿ ರಫೀಕ್ ಭೇಪಾರಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಕೊಮು ಸೌಹಾರ್ದತೆಗೆ ದಕ್ಕೆ ತರುವದಲ್ಲದೆ ಸಮಾಜದ ಸ್ವಸ್ಥ ಹಾಳು ಮಾಡಿದ್ದು ಕೊಮುಗಲಭೆಗಳಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಅಪರಾಧಿಗಳಿದ್ದರು ಎಫ್.ಐ.ಆರ್ ದಲ್ಲಿ ನಮೊದಿಸಿದ 7 ಜನರಲ್ಲಿ ಕೇವಲ ಇಬ್ಬರನ್ನು ಬಂಧಿಸಿದ್ದು ಉಳಿದವರು ಬೇಕಾ ಬಿಟ್ಟಿಯಾಗಿ ಸಾರ್ವಜನಿಕವಾಗಿ ಮಾತನಾಡುತ್ತಾ ಕಾನೂನನ್ನೆ ಪ್ರಶ್ನಿಸುವ ಮಟ್ಟದಲ್ಲಿದ್ದಾರೆ. ಇವರ ಬಂಧನ ಯಾವಾಗ ಎಂದು ಪ್ರಶ್ನಿಸಿದರು.

ಇವರನ್ನು ತಕ್ಷಣ ಬಂಧಿಸಬೇಕು. ಈ ಪ್ರಕರಣದಲ್ಲಿ ಬೆಳಗಾವಿ ನಗರದಲ್ಲಿರುವ ಕೆಲ‌ ಸ್ವಯಂ ಘೋಷಿತ ನಾಯಕರ ವ್ಯವಸ್ಥಿತವಾದ ಜಾಲ,‌ ಅಪರಾಧಿಗೆ ಇಂತಹ ಕುಕೃತ್ಯಕ್ಕೆ ಸಂಪೂರ್ಣವಾಗಿ ಸಹಾಯಮಾಡಿ ಅಪರಾಧಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದರು.

ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಇದೊಂದು ಆಧುನಿಕ ಕಾಲದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಹ ಪ್ರಕರಣವಾಗಿದ್ದು,
ಮುನವಳ್ಳಿ ಪಟ್ಟಣದಲ್ಲಿ ಈ ಪ್ರಕರಣದಲ್ಲಿರುವ ಅಪರಾಧಿ ಇನ್ನು ಇಂತಹ ಹೀನ ಕೆಲಸಗಳಲ್ಲಿ ಭಾಗಿಯಾಗಿರುವ ಶಂಕೆಇದ್ದು ಅಲ್ಲದೆ ಕಾನುನು ಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದ್ದು ಮಟ್ಕಾ ದಂಧೆ, ದೇಶಿ ಸರಾಯಿ ಮಾರಾಟ, ಗೂಂಡಾಗಿರಿ, ಹಿಂದೂ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಂಡು ಅವರ ಮನೆಯವರಿಗೆ ಧಮಕ್ಕಿ ನೀಡಿ ಕೊಲೆ ಬೆದರಿಕೆ ಹಾಕೂವ ಕ್ರೂರಿತನದ ವರ್ತನೆ ಬೆಳೆಸಿಕೊಂಡಿದ್ದು ಗೂಂಡಾಗಳ ಗ್ಯಾಂಗ್ ಹೊಂದಿದ್ದಾನೆ ಎಂಬ ಆಪಾದನೆ‌ ರಫೀಕ್ ಬೇಫಾರಿ ಇತನ ಹಾಗೂ ಇತನ ಗ್ಯಾಂಗ್ ಮೇಲೆ‌ಇದ್ದು ಇದರ ಹಿಂದೆ ಜೀಹಾದಿ ಮನಸ್ಥಿತಿಯ ಜನರು ಕಾರ್ಯನಿರ್ವಹಿಸುತಿದ್ದಾರೆ ಎಂಬ ಭಯ ಜನಸಾಮಾನ್ಯರಲ್ಲಿದ್ದು, ಇದರ ಬೇರು ಸಮೇತ ಕಿತ್ತುಹಾಕಲು ಮತ್ತು ಇವರ ಚಟುವಟಿಕೆ ತಿಳಿಯಲು ಉನ್ನತ ತನಿಖೆ ಅತ್ಯವಶ್ಯಕವಾಗಿದೆ. ಆದ್ದರಿಂದ ಈ ಅಪರಾಧವನ್ನು ಹಗುರವಾಗಿ ಪರಿಗಣಿಸದೆ ಇದರ ಜಾಲವನ್ನು ಕಂಡು ಹಿಡಿದು ಸಮಾಜಘಾತುಕ ಶಕ್ತಿಯನ್ನು ಮಟ್ಟಾಹಾಕವಂತೆ ಭಾರತೀಯ ಜನತಾ ಪಾರ್ಟಿ ತಮ್ಮಲ್ಲಿ ಆಗ್ರಹಮಾಡುತ್ತೆವೆ ಎಂದು ತಿಳಿಸಿದರು.

ಈ ವಿಷಯವನ್ನು ಗೃಹಮಂತ್ರಿಗಳು ಕರ್ನಾಟಕ ಸರ್ಕಾರ
ಪೋಲಿಸ್ ಮಹಾನಿರಿಕ್ಷಕರು ಕರ್ನಾಟಕ ಸರ್ಕಾರ ಇವರ ಗಮನಕ್ಕೆ ತರುವದಾಗಿ ಜಿಲ್ಲಾ ಬಿಜೆಪಿ ಎಸ್ಸಿ ಮೊರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಮಾದ್ಯಮ ಸಹ ಸಂಚಾಲಕರು ಬಾಳೇಶ ಚವ್ವನ್ನವರ ಜಿಲ್ಲಾ ಕೋಶಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ‌ ಸಂತೋಷ ದೇಶನೂರ, ಬಿಜೆಪಿ ಮುಖಂಡರಾದ ಮಂಜುನಾಥ ಪಮ್ಮಾರ ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!