ಕಾಳಗಿ : ಜಾತಿ ಹಾಗೂ ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣ, ಮತ್ತು ಬೌದ್ಧ ದೃಷ್ಟಿಕೋಣವನ್ನು ಬಲಪಡಿಸಲು ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ವತಿಯಿಂದ ಗುರುವಾರ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಬೌದ್ಧ ಉಪಾಸಕ ಮರೇಪ್ಪ ಹಳ್ಳಿ ಮಾತನಾಡಿ, “ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಆಯೋಗವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಕೈಗೊಂಡಿರುವ ಜನಗಣತಿ ಸಮೀಕ್ಷೆಯಲ್ಲಿ ದಲಿತ ಸಮುದಾಯದ ಪ್ರತಿಯೊಬ್ಬರೂ ಧರ್ಮ ಬೌದ್ಧ ಎಂದೇ ನಮೂದಿಸಬೇಕು ” ಎಂದು ಕರೆ ನೀಡಿದರು.
ಅವರು ವಿವರವಾಗಿ ತಿಳಿಸಿ, ಕಾಲಂ ನಂ. 8ರಲ್ಲಿ ಧರ್ಮ ಬೌದ್ಧ ಎಂದು, ಕಾಲಂ ನಂ. 9ರಲ್ಲಿ ಪರಿಶಿಷ್ಟ ಜಾತಿ (ಹೊಲೆಯ, ಛಲವಾದಿ ಇತ್ಯಾದಿ) ಎಂದು ಹಾಗೂ ಕಾಲಂ ನಂ. 10ರಲ್ಲಿ ಉಪಜಾತಿ ಹೊಲೆಯ ಎಂದು ದಾಖಲಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ದಲಿತ ಮುಖಂಡರಾದ ಸಂತೋಷ ನರನಳ, ಮಲ್ಲಿಕಾರ್ಜುನ ಗವ್ಹಾರ, ಅಶೋಕ್ ಬೇಡಸೂರ್, ಸುಧಾಕರ್ ಸಿ. ನೂಲಕರ್, ಮನೋಹರ್ ರಾಜಾಪೂರ, ಮಾಣಿಕ್ ಕೋಡ್ಲಿ, ಸೂರ್ಯಕಾಂತ್ ಮಂತಾ, ಭೀಮರಾವ ರೈಕೋಡ್, ಕೃಷ್ಣ ಸೇರಿ, ಜೈಭೀಮ್ ಜಂಬಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಹಣಮಂತ ಕುಡಹಳ್ಳಿ




