ಕಾರಟಗಿ: ಇಂದಿನಿಂದ ರಾಜ್ಯಾದ್ಯಂತ ಜರುಗುವ ಜಾತಿ ಗಣತಿ ಸಂದರ್ಭದಲ್ಲಿ ‘ಮಾದಿಗ’ ಎಂದು ಧೈರ್ಯದಿಂದ, ಹೆಮ್ಮೆಯಿಂದ ಬರೆಯಿಸಿ ಎಂದು ಕಾರಟಗಿ ಮಾದಿಗ ಸಮಿತಿ ತಮ್ಮ ಮಾದಿಗ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದಲಿತ ವಿಮೋಚನೆ ಸಂಘಟನೆ ಜಿಲ್ಲಾಧ್ಯಕ್ಷರಾದ ಎಂ. ಜಮದಗಿ ಅವರು ಮಾತನಾಡಿ, ಜಾತಿ ಗಣತಿ ಸಂದರ್ಭದಲ್ಲಿ ಗಣತಿ ಅಧಿಕಾರಿಗಳು ಮನೆಗೆ ಬಂದಾಗ ಯಾವುದೇ ಸಂಕೋಚ ಇಲ್ಲದೇ ಮಾದಿಗ ಎಂದು ತಪ್ಪದೇ ಬರೆಯಿಸಿ ಎಂದು ತಮ್ಮ ಮಾದಿಗ ಬಾಂಧವರಲ್ಲಿ ಮನವಿ ಮಾಡಿಕೊಂಡರು.

ಮಾದಿಗ ಸಮಿತಿಯಿಂದ ಮುದ್ರಿಸಲಾದ ಕರಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದ ಸಮಿತಿ ಮುಖಂಡರು, ಮೀಸಲಾತಿ ಸಂಬಂಧ ಸರಕಾರಿ ಸೌಲಭ್ಯಗಳನ್ನು ಪಡೆಯಲು ಮುಂದಿನ ದಿನಗಳಲ್ಲಿ ತಮಗೆ ಅನುಕೂಲ ಆಗಲಿದ್ದು, ಕಾರಣ ತಪ್ಪದೇ ಮಾದಿಗ ಎಂದು ಬರೆಯಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೌನೇಶ ಭಜಂತ್ರಿ, ಶಾನಪ್ಪ ವಣಿಗೇರಿ, ಪ್ರಧಾನ ಕಾರ್ಯದರ್ಶಿ, ಹಣಮೇಶ ವಡ್ರಟ್ಟಿ, ಲೊಕೇಶ ಮರಲನಹಳ್ಳಿ ಹಾಗೂ ಇನ್ನು ಅನೇಕ ಸಂಘಟನೆ ಮುಖಂಡರು ಇದ್ದರು.




