Ad imageAd image

ಜಾತಿ ವೈಷಮ್ಯ :  ಎಲ್ಲಾ ಕ್ಷೌರದ ಅಂಗಡಿಗಳು ಬಂದ್‌

Bharath Vaibhav
ಜಾತಿ ವೈಷಮ್ಯ :  ಎಲ್ಲಾ ಕ್ಷೌರದ ಅಂಗಡಿಗಳು ಬಂದ್‌
WhatsApp Group Join Now
Telegram Group Join Now

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿನ ಜಾತಿ ವೈಷಮ್ಯ ಇಡೀ ಗ್ರಾಮವನ್ನೇ ಇಬ್ಭಾಗ ಮಾಡಿದೆ. ಒಬ್ಬರ ವಿರುದ್ಧ ಇನ್ನೊಬ್ಬರು ದ್ವೇಷ ಕಾರುತ್ತಿದ್ದು, ಇದರಿಂದಾಗಿ ಗ್ರಾಮದಲ್ಲಿದ್ದ ಎಲ್ಲ 8 ಕ್ಷೌರದ ಅಂಗಡಿಗಳನ್ನು ಮಾರ್ಚ್‌ 1ರಿಂದಲೇ ಬಂದ್‌ ಮಾಡಲಾಗಿದೆ.

ಗ್ರಾಮದಲ್ಲಿ ಕುರುಬ, ವಾಲ್ಮೀಕಿ ಮತ್ತು ಮಾದಿಗ ಸಮುದಾಯದ ನಡುವೆ ಹಿಂದಿನಿಂದಲೂ ಮನಸ್ತಾಪ ಮನೆ ಮಾಡಿದೆ.

ಅವರನ್ನು ಕಂಡರೆ ಇವರಿಗೆ, ಇವರ ಕಂಡರೆ ಅವರಿಗಾಗದು. ಕ್ಷೌರ ಮಾಡಿದರೆ, ಇವರ ದ್ವೇಷ ಕಟ್ಟಿಕೊಳ್ಳಬೇಕು. ಇವರಿಗೆ ಕ್ಷೌರ ಮಾಡಿದರೆ ಅವರಿಗೆ ಕೋಪ. ಹೀಗಾಗಿ ಅಂಗಡಿ ಬಂದ್‌ ಮಾಡಿದ್ದೇನೆ’ ಎಂದು ಕ್ಷೌರದಂಗಡಿಯ ಮಾಲೀಕರೊಬ್ಬರು ಹೇಳಿದರು.

‘ಎರಡೂ ಜಾತಿಯವರ ಜಗಳದಲ್ಲಿ ಬಡವಾಗುವವರು ನಾವು. ವೈಷಮ್ಯ ಕಡಿಮೆ ಆದ ಮೇಲೆ ಅಂಗಡಿ ತೆಗೆಯುತ್ತೇನೆ’ ಎಂದು ಮತ್ತೊಬ್ಬ ಕ್ಷೌರಿಕರು ಪ್ರತಿಕ್ರಿಯಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!