ಬೆಂಗಳೂರು : ಜಾತಿ ಸಮೀಕ್ಷೆಯ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿದ್ದಾರೆ. ತಮ್ಮ ಕಚೇರಿಗೆ ಸಮೀಕ್ಷೆಗೆ ಬಂದ ಅಧಿಕಾರಿಗಳ ಎದುರೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಇದೊಂದು ಹಲ್ಕಾ ಸಮೀಕ್ಷೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿಗಣತಿಯು ಗೊಂದಲಗಳಿಂದ ಕೂಡಿದೆ. ಇದೊಂದು ಮನೆಹಾಳು ಮಾಡುವ ಸಮೀಕ್ಷೆಯಾಗಿದೆ. ಇಲ್ಲ ಸಲ್ಲದ ಪ್ರಶ್ನೆಗಳನ್ನೆಲ್ಲಾ ಕೇಳಲಾಗುತ್ತಿದೆ. ವೋಟಿಗಾಗಿ ನಡೆಸುತ್ತಿರುವ ಈ ಸಮೀಕ್ಷೆಯು ಅವೈಜ್ಞಾನಿಕ ಸಮೀಕ್ಷೆಯಾಗಿದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.
ಸಮೀಕ್ಷೆ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ವಿ. ಸೋಮಣ್ಣ ನಿರಾಕರಿಸಿದ್ದಾರೆ. ಸುಮಾರು 1.04 ತಾಸು ಸಮಯವನ್ನು ಈ ಸಮೀಕ್ಷೆ ತೆಗೆದುಕೊಂಡಿದೆ. ಜನಸಾಮಾನ್ಯರ ಪಾಡೇನು. ಈ ಎಲ್ಲ್ ಪ್ರಶ್ನೆಗಳಿಗೆ ಉತ್ತರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.




