ಬಾಗೆಪಲ್ಲಿ (ಭಾಗ್ಯನಗರ ): ‘ಎಲ್ಲ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಸಿಗುವುದು ಬಹಳ ಅಗತ್ಯ’ ಎಂದು ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಚಾರಿ ಡಿಕೆ ತಿಳಿಸಿದರು.
ಇಂದು ಉಚಿತ ಕಾನೂನು ಸೇವಾ ಸಮಿತಿ,ವಕೀಲರ ಸಂಘ ಬಾಗೇಪಲ್ಲಿ ಸಾರಿಗೆ ಇಲಾಖೆ ಬಾಗೇಪಲ್ಲಿ ಇವರ ಸಂಯುಕ್ತ ಆಶಯದಲ್ಲಿ ಸಾರಿಗೆ ಇಲಾಖೆ ಡಿಪೋದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಜೀವನದಲ್ಲಿ ಪ್ರತಿಯೊಬ್ಬರಿಗೆ ಶಿಕ್ಷಣ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ಸಮಾಜಿಕ ನ್ಯಾಯದ ಪ್ರಕಾರ ಅವಕಾಶಗಳು ಸಿಗಬೇಕು.
ಆಗ ವಿಶ್ವ ಸಾಮಾಜಿಕ ನ್ಯಾಯ ದಿನಕ್ಕೆ ಅರ್ಥ ಬರುತ್ತದೆ’ ಎಂದರು.
ಸಮಾಜದಲ್ಲಿನ ಬಡತನ ನಿರುದ್ಯೋಗ ಮತ್ತು ಅಸಮಾನತೆಗಳನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಅಲ್ಲದೆ ಲಿಂಗ ಸಮಾನತೆ ಮಾನವ ಹಕ್ಕುಗಳ ರಕ್ಷಣೆ, ಸಾಮಾಜಿಕ ಅಡೆತಡೆಗಳನ್ನು ನಿವಾರಿಸಿ ಎಲ್ಲರನ್ನು ಒಳಗೊಳ್ಳುವ ಸಮಾಜವನ್ನು ನಿರ್ಮಿಸುವುದು ಈ ಸಾಮಾಜಿಕ ನ್ಯಾಯದ ಉದ್ದೇಶವಾಗಿದೆ ಎಂದರು.
‘ಸಮಾಜದಲ್ಲಿ ಇರುವ ಜನರಿಗೆ ಜಾತಿ, ವರ್ಗ, ಲಿಂಗಭೇದಗಳಿಂದ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ವಿಶ್ವ ಸಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ.
ಜನರಿಗೆ ಶಾಂತಿಯುತ ಮತ್ತು ಸುಭದ್ರ ಜೀವನ ನಡೆಯಬೇಕು ಎಂದರೆ ಸಮಾಜದ ರಚನೆಯನ್ನು ಬದಲಾವಣೆ ಮಾಡಿದರೆ ಮಾತ್ರ ಸಾಧ್ಯ’ ಎಂದು ಹೇಳಿದರು.
ಪ್ರಕೃತಿಯಲ್ಲಿ ಅನೇಕ ಜೀವರಾಶಿಗಳಿದವೇ ಅವುಗಳಿಗೆ ಇಲ್ಲದ ಜಾತಿ ನಮಗೆ ಏಕೆ ನೀರಿಗೆ ಇಲ್ಲದ ಜಾತಿ ಪ್ರಕೃತಿ ವಿಲ್ಲದ ಜಾತಿ ನಮಗೆ ಏಕೆ ಎಂಬ ವಿಷಯವನ್ನು ನಾವು ಮನಗಣಬೇಕು ಎಂದರು.
ಚಾಲಕರು ಮತ್ತು ನಿರ್ವಾಹಕರು ಮುತುವರ್ಜಿಯಿಂದ ಗ್ರಾಹಕರ ಬಗ್ಗೆ ವ್ಯವಹರಿಸಬೇಕು ಅನೇಕ ಸಮಸ್ಯೆಗಳಿಂದ ಪ್ರತಿಯೊಬ್ಬರು ಬಳಲುತ್ತಿರುತ್ತೇವೆ ಪ್ರತಿಯೊಬ್ಬರು ವೈಯಕ್ತಿಕ ಸಮಸ್ಯೆಗಳನ್ನು ಬದಿಗೊಟ್ಟಿ ತಮ್ಮ ಕರ್ತವ್ಯವನ್ನ ತಾವು ನಿರ್ವಹಿಸಬೇಕು ಗ್ರಾಹಕರು ತಮ್ಮ ದೇವರಿಂದ ಭಾವಿಸಬೇಕು ಅವರು ತಮ್ಮ ವೈಯಕ್ತಿಕ ಸಮಸ್ಯೆಗಳು ನಿಮಿತ್ತ ತಾವುಗಳು ಕೋಪ ರೀತಿಯಲ್ಲಿ ನಡೆದುಕೊಂಡರು ಸಹ ಅವುಗಳನ್ನು ಕ್ಷಮಿಸಿ ಅವುಗಳ ಬಗ್ಗೆ ಮೃದುವರದಿಂದ ನಡೆದುಕೊಳ್ಳಬೇಕು ಎಂದರು.
‘ಸಮಾಜದಲ್ಲಿ ಎಲ್ಲರೂ ದುಡಿಯುವ ಕೆಲಸ ಮಾಡುತ್ತಿದ್ದಾರೆ.
ನಮ್ಮ ದುಡಿಮೆಯಿಂದ ಸಾಮಾಜಿಕ ಉತ್ಪಾದನೆ ನಡೆಯುತ್ತದೆ.
ಆದರೆ,
ಅದು ಸಾಮಾಜಿಕವಾಗಿ ಜನರಿಗೆ ದೊರೆಯುತ್ತಿಲ್ಲ. ಬಡವರು ಮತ್ತು ಮಧ್ಯಮ ವರ್ಗಕ್ಕೆ ಜೀವನ ಮಾಡಲು ಸಾಧ್ಯವೇ’ ಎಂದು ಹೇಳಿದರು.
ಅಲ್ಲದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸಾಮಾಜಿಕ ಸಮಾನತೆಗಾಗಿ ವಿಶ್ವಸಮಾನತೆಗಾಗಿ ಅನೇಕ ಕಾರ್ಯಕ್ರಮಗಳನ್ನ ಜಾರಿ ಮಾಡುತ್ತಿದೆ ಅವುಗಳಲ್ಲಿ ಮುಖ್ಯವಾಗಿ ಅಂತರ್ಜಾತಿ ವಿವಾಹ ಸಮಾಜದಲ್ಲಿ ಜಾತಿ ಜಾತಿಗಳ ಬಗ್ಗೆ ಒಡಕನ್ನ ತೊಡೆದುಹಾಕಲು ಕಾರ್ಯಕ್ರಮಗಳ ರೂಪಿಸಿದ್ದರು ಸಹ ಅವುಗಳ ಬಗ್ಗೆ ಗಮನಹರಿಸುತ್ತಿಲ್ಲ ನಾವು ಅವುಗಳನ್ನು ಮನಗಂಡು ಸಾಮಾಜಿಕ ನ್ಯಾಯದ ಕಡೆಗೆ ಮುಂದುವರೆಯಬೇಕು ಎಂದರು.
ಹಿರಿಯ ವಕೀಲ ಎಜಿ ಸುಧಾಕರ್ ರವರು ಮಾತನಾಡಿ ‘ಸಮಾಜದಲ್ಲಿ ಜನರು ಯಾವುದೇ ಜಾತಿ, ಭೇದ, ವರ್ಗ, ಪಂಗಡ ಮಾಡದೇ ನಾವೆಲ್ಲರೂ ಒಂದೇ ಎನ್ನುವ ಭಾವನೆ ಇರಬೇಕು’ ಎಂದು ಹೇಳಿದರು.
ಅಲ್ಲದೆ ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಒಡಕು,
ಜಾತಿ ಜಾತಿಗಳ ಮಧ್ಯೆ ಮಠ ಜಾತಿ ಜಾತಿಗಳ ಮಧ್ಯೆ ಭೇದಭಾವ ಮಾಡಿಕೊಳ್ಳಬಾರದು
ಒಂದೇ ಜಾತಿ ಒಂದೇ ಮತ ನಾವೆಲ್ಲರೂ ಸಮಾನತೆಯಿಂದ ಪ್ರತಿಯೊಬ್ಬರನ್ನ ಕಾಣಬೇಕು ಎಂದು ತಿಳಿಸಿದರು.
ಸಾರಿಗೆ ಇಲಾಖೆ ವತಿಯಿಂದ ಗೌರವಾನ್ವಿತ ನ್ಯಾಯಾಧೀಶರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾರಿಗೆ ಇಲಾಖೆಯ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ,
ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಜೆ ಎನ್ ಮಂಜುನಾಥ್, ವಕೀಲರ ಉಪಾಧ್ಯಕ್ಷರಾದ ಸಿ ರವಿ, ಸಂಘದ ಕಾರ್ಯದರ್ಶಿಗಳಾದ ಜಯಪ್ಪ,ಸಂಘದ ಖಜಾಂಚಿ ಬಿಂದು ಕುಮಾರಿ, ವಕೀಲರಾದ ನಾಗಭೂಷಣ ಎನ್, ಬಾಲು ನಾಯಕ, ಮಲ್ಲಿಕಾರ್ಜುನ, ಬಾಬು, ರವನ, ಹರೀಶ, ಪೊಲೀಸ್ ಅಸ್ಲಾಂ, ಚಾಲಕ ಮತ್ತು ನಿರ್ವಾಹಕರು ಹಾಗೂ ಉಚಿತ ಕಾನೂನು ಸೇವಾ ಸಂಸ್ಥೆ ಸಿಬ್ಬಂದಿ ನ್ಯಾಯಾಲಯದ ಸಿಬ್ಬಂದಿ ರಮೇಶ್ ಮತ್ತು ರಂಗಸ್ವಾಮಿ ಇತರರು ಹಾಜರಿದ್ದರು.
ವರದಿ :ಯಾರಬ್. ಎಂ.




