ಸೇಡಂ : ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಮುತ್ತಾಗ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ದುಷ್ಕರ್ಮಿಗಳು ಬಹುಜನ ನಾಯಕ ನಿಜ ಶರಣ ಅಂಬಿಗರ ಚೌಡಯ್ಯನವರ ಪುತ್ಥಳಿಗೆ ವಿರೂಪಗೊಳಿಸಿದ ಹೇಯ ಕೃತ್ಯ ಮುತಾಗ ಗ್ರಾಮದಲ್ಲಿ ನಡೆದಿದೆ ಈ ಒಂದು ಘಟನೆಯುನ್ನು ಮರಳಿ ಆಗದಂತೆ ಅಲ್ಲಿ ಇರುವ ಸ್ಥಳೀಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಅದೆ ರೀತಿ ಪ್ರತಿ ಹಳ್ಳಿಯಲ್ಲಿ ಮಹಾ ಪುರುಷ್ಯರಿಗೆ ವಿರೂಪಗೊಳಿಸುವ ಕೃತ್ಯ ದಿನೇ ದಿನೇ ಹೆಚ್ಚಾಗುತ್ತಿದೆ ಇದನ್ನು ತಡೆಯಲು ಸರ್ಕಾರ ಪ್ರತಿ ಮಹಾಪುರುಷ್ಯರ ಪುತ್ಥಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಜೊತೆಗೆ ಈ ಕೃತ್ಯಕೆ ಕಾರಣವಾದ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಬಹುಜನ ಸಮಾಜ ಪಕ್ಷ ಸೇಡಂ ವಿಧಾನ ಸಭೆಯ ಅಧ್ಯಕ್ಷ ರೇವಣಸಿದ್ದಪ್ಪ ಎಸ್. ಸಿಂಧೆ ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




