Ad imageAd image

ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ

Bharath Vaibhav
ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ
WhatsApp Group Join Now
Telegram Group Join Now

ಬಾಣಾವರ :ಹೋಬಳಿ ವ್ಯಾಪ್ತಿಯ ಚಿಕ್ಕೂರು ಗ್ರಾಮದಿಂದ ಹಿರಿಯೂರು ಗ್ರಾಮದವರಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷರು ಕೆ.ಎಂ.ಶಿವಲಿಂಗೇಗೌಡರು ಇಂದು ಚಿಕ್ಕೂರು ಗ್ರಾಮದಲ್ಲಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ರಸ್ತೆಯನ್ನು ಅನೇಕ ಬಾರಿ ಅಭಿವೃದ್ಧಿ ಪಡಿಸಿದ್ದರೂ ಕೂಡ ಕೆರೆ ಪಕ್ಕದಲ್ಲಿರುವುದರಿಂದ ಪದೆ ಪದೆ ಹಾಳಾಗುತ್ತಿದೆ. ಆದ್ದರಿಂದ ಸಿ.ಸಿ.ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿ ಅನುದಾನ ತರಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿ ಇಂಜಿನಿಯರುಗಳಿಗೆ ಸೂಚನೆ ನೀಡಿದರು.

ಈ ಕಾರ್ಯದಲ್ಲಿ ಮಾಜಿ ತಾ.ಪಂ.ಅಧ್ಯಕ್ಷೆ ಮಂಜುಳಾಬಾಯಿ , ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ, ಬೆಂಡೆಕೆರೆ ಗ್ರಾ.ಪಂ ಅಧ್ಯಕ್ಷೆ ಗೀತಾಕುಮಾರಿ, ಮಾಜಿ ಗ್ರಾ.ಪಂ ಅಧ್ಯಕ್ಷ ಕುಬೇರ ಸದಸ್ಯೆ ಭಾವನ, ಮುಖಂಡರಾದ ಪ್ರಭುದೇವ, ಶೇಕರ್, ಮಂಜಣ್ಣ, ಪರಮೇಶ್, ಗಂಗಾಧರ, ಗುರುಮೂರ್ತಿ ,ರೇಣುಕಣ್ಣ, ಚಂದ್ರೇಗೌಡ, ಮಧು, ಎ.ಇ.ಇ ಬಾಲಾಜಿ , ಇಂಜಿನಿಯರ್ ಅಶ್ವಿನಿ ಹಾಗೂ ಗ್ರಾಮಸ್ಥರು ಹಾಜರಿದ್ದರು..

ವರದಿ :ರಾಜ ಅರಸೀಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!