Ad imageAd image

ಸಿಸಿಬಿ ಪೊಲೀಸರ ‘ಸರ್ಜಿಕಲ್ ಸ್ಟ್ರೈಕ್’!

Bharath Vaibhav
ಸಿಸಿಬಿ ಪೊಲೀಸರ ‘ಸರ್ಜಿಕಲ್ ಸ್ಟ್ರೈಕ್’!
WhatsApp Group Join Now
Telegram Group Join Now

ಬೆಳಗಾವಿ : ​ ಕ್ರೈಮ್ ಥೀಮ್  
​ಮೊಡಕಾ ಬಜಾರ್‌ನಲ್ಲಿ ಮಟಕಾ ಅಡ್ಡೆ ಧೂಳೀಪಟ!
​ಸಿಸಿಬಿ ಪಿಐ ಮಂಜುನಾಥ ನಾಯಕ ಟೀಮ್‌ನಿಂದ ಭರ್ಜರಿ ಬೇಟೆ!
​ಬೆವರು ಸುರಿಸಿದ ಜನರ ಹಣ ಲೂಟಿ ಮಾಡ್ತಿದ್ದವರಿಗೆ ಖಾಕಿ ಶಾಕ್!
​ಮೂವರು ಅಂದರ್.. ಸೂತ್ರಧಾರಿ ಫಾಹೀಮ್ ಕೊತ್ವಾಲನಿಗೆ ಸಂಕಷ್ಟ!

ಬೆಳಗಾವಿಯ ಮಟಕಾ ದಂಧೆಕೋರರೇ ಎಚ್ಚರ! ನಿಮ್ಮ ಅಡ್ಡೆಗಳ ಮೇಲೆ ಖಾಕಿ ಕಣ್ಣು ಬಿದ್ದಿದೆ. ಹಳೆ ಮೊಡಕಾ ಬಜಾರ್‌ನಲ್ಲಿ ಸದ್ದಿಲ್ಲದೆ ನಡೀತಿದ್ದ ಅಕ್ರಮ ಮಟಕಾ ಸಾಮ್ರಾಜ್ಯಕ್ಕೆ ಸಿಸಿಬಿ ಪೊಲೀಸರು ಲಗ್ಗೆ ಇಟ್ಟಿದ್ದಾರೆ. ಕೇವಲ ಹಣ ಅಷ್ಟೇ ಅಲ್ಲ, ಓಸಿ ಚೀಟಿ ಸಮೇತ ದಂಧೆಕೋರರನ್ನು ಲಾಕಪ್‌ಗೆ ತಳ್ಳಿದ್ದಾರೆ ಮಂಜುನಾಥ ನಾಯಕ ಮತ್ತು ಅವರ ತಂಡ. ಏನಿದು ಆಪರೇಷನ್? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.”

ಬೆಳಗಾವಿಯ ಖಂಜರ ಗಲ್ಲಿ… ಇಲ್ಲಿನ ಹಳೆ ಮೊಡಕಾ ಬಜಾರ್‌ನಲ್ಲಿ ‘ಶ್ರೀದೇವಿ ನೈಟ್ ಮೇನ್ ಬಜಾರ್’ ಹೆಸರಲ್ಲಿ ಲೂಟಿ ನಡೀತಿದೆ ಅನ್ನೋದು ಸಿಸಿಬಿ ಪೊಲೀಸರಿಗೆ ಸಿಕ್ಕ ಪಕ್ಕಾ ಇನ್ಫಾರ್ಮೇಷನ್. ಕ್ಷಣಾರ್ಧದಲ್ಲಿ ಆಪರೇಷನ್ ಪ್ಲ್ಯಾನ್ ಮಾಡಿದ ಸಿಸಿಬಿ ಪಿಐ ಮಂಜುನಾಥ ನಾಯಕ, ದಂಧೆಕೋರರು ಎಸ್ಕೇಪ್ ಆಗೋಕೆ ಚಾನ್ಸೇ ಕೊಡಲಿಲ್ಲ!

“ಅಶೋಕ ಪವಾರ, ಗಜಾನನ ಪಾಟೀಲ ಹಾಗೂ ಹವನ ಭಾತಖಾಂಡೆ.. ಇವರೇ ನೋಡಿ ಆ ಮೂವರು ಕಿಂಗ್‌ಪಿನ್‌ಗಳು! ಜನರ ಜೇಬಿಗೆ ಕನ್ನ ಹಾಕಿ ಸಂಗ್ರಹಿಸಿದ್ದ 11,180 ರೂಪಾಯಿ ನಗದು ಮತ್ತು ಓಸಿ ಚೀಟಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಇಡೀ ದಂಧೆಯ ಹಿಂದಿರೋ ಫಾಹೀಮ್ ಕೊತ್ವಾಲ ಎಂಬಾತನಿಗೂ ಈಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.”

​ಬೆಳಗಾವಿಯಲ್ಲಿ ಅಕ್ರಮ ಮಟಕಾ ದಂಧೆ ನಿಲ್ಲೋದು ಯಾವಾಗ?
​ಬಡವರ ಹಣ ಲೂಟಿ ಮಾಡುವ ಇವರ ಹಿಂದೆ ಇರೋ ಶಕ್ತಿ ಯಾರು?
​ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ನಡೀತಿದ್ರೂ ಸುಳಿವು ಸಿಗಲಿಲ್ವಾ?

“ಒಟ್ಟಿನಲ್ಲಿ, ಸಿಸಿಬಿ ಪೊಲೀಸರ ಈ ಮಿಂಚಿನ ದಾಳಿ ಬೆಳಗಾವಿಯ ಉಳಿದ ಮಟಕಾ ಅಡ್ಡೆಗಳಿಗೂ ಒಂದು ಸ್ಟ್ರಾಂಗ್ ವಾರ್ನಿಂಗ್. ದಂಧೆ ನಿಲ್ಲಿಸದಿದ್ರೆ ಮುಂದಿನ ಸರದಿ ನಿಮ್ಮದೇ ಅನ್ನೋದು ಖಚಿತ.

ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!