ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಚಿಕ್ಕ ಬಾಣವಾರ ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಸರ್ಕಾರ ವತಿಯಿಂದ ‘ಇಂದಿರಾ ಕ್ಯಾಂಟೀನ್’ ಕ್ಷೇತ್ರದ ಶಾಸಕ ಎಸ್ ಮುನಿರಾಜು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಇಲ್ಲಿನ ಸುತ್ತಮುತ್ತಲಿನ ಬಡವರು , ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಸ್ಥರು ಮತ್ತು ಸಾಮಾನ್ಯ ವರ್ಗದ ಜನರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ‘ಇಂದಿರಾ ಕ್ಯಾಂಟೀನ್’ ಅಗತ್ಯ ಇರುವುದನ್ನು ಗಮನಿಸಿದ ರಾಜ್ಯ ಸರ್ಕಾರ ನೂತನವಾಗಿ ಕ್ಯಾಂಟೀನ್ ಪ್ರಾರಂಭಿಸಿದೆ ಎಂದು ಕ್ಷೇತ್ರದ ಶಾಸಕ ಎಸ್ ಮುನಿರಾಜು ತಿಂಡಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇದೆ ವೇಳೆ ಶಾಸಕ ಎಸ್ ಮುನಿರಾಜು ನೂತನವಾಗಿ ನಿರ್ಮಿಸಿರುವ ಶೌಚಾಲಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್, ಬಿಜೆಪಿ ಹಿರಿಯ ಮುಖಂಡ ಸಿಂಹ, ಪಾಟೀಲ್, ಕಬಿರ್ ಅಹ್ಮದ್, ಬಿ.ಎಂ.ಚಿಕ್ಕಣ್ಣ, ಚಿಕ್ಕಬಾಣವಾರ ಪುರ ಸಭೆ ಮುಖ್ಯಾಧಿಕಾರಿ ಎಂ.ಸಂದೀಪ್ ಮತ್ತು ಇಂಜಿನಿಯರ್ ಸಿಬ್ಬಂದಿ ವರ್ಗದವರು ಮುಂತಾದವರು ಇದ್ದರು.




