ಬಸವನಬಾಗೇವಾಡಿ: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದಿರುವ ತಮಿಳು ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ನಗರದ ಬಸವ ವೃತ್ತದಲ್ಲಿ ನಟ ಕಮಲ್ ಹಾಸನ್ ಚಿತ್ರವನ್ನು ಸುಟ್ಟು ಪ್ರತಿಭಟಸಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಕಮಲ್ ಹಾಸನ್ ಪರವಾಗಿರುವ ಚಿತ್ರನಟಿ ರಮ್ಯಾಳ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಚಪ್ಪಲಿಯಿಂದ ಹೊಡೆದು ಅವರ ಭಾವಚಿತ್ರವನ್ನು ಟೈಯರ್ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕರವೇ ರಾಜ್ಯ ಪ್ರಧಾನ ಸಂಚಾಲಕರು ಹಾಗೂ ಅವಳಿ ಜಿಲ್ಲಾ ಉಸ್ತುವಾರಿಗಳು ಅಶೋಕ್ ಹಾರಿವಾಳ ಕನ್ನಡಕ್ಕೆ ತಮಿಳು ಭಾಷೆ ಮೂಲ ಎಂದು ಹೇಳಿರುವ ನಟ ಕಮಲ್ ಹಾಸನ್ ಹೇಳಿಕೆ ತರವಲ್ಲ. ತಮಿಳಿಗಿಂತಲೂ ಕನ್ನಡ ಬಹಳ ಹಳೆಯ ಭಾಷೆಯಾಗಿದ್ದು, ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ನಟ ಕಮಲ್ ಹಾಸನ್ಗೆ ರಾಜಕೀಯ ಪಕ್ಷ ಕಟ್ಟಿರುವ ಕಾರಣ ಒಂದು ರಾಜ್ಯದ ಜನರ ಒಲೈಕೆಯ ಮಾತುಗಳನ್ನು ಆಡಿರುವುದು ಖಂಡನೀಯ’ ಎಂದರು.

ಪ್ರತಿಭಟನೆಯಲ್ಲಿ ವೇದಿಕೆಯ ಕಾರ್ಯದರ್ಶಿ ರಾಜ್ಯ ಸಂಚಾಲಕ ಸಂತೋಷ್ ಗೌಡ ಪಾಟೀಲ್, ಶ್ರೀಕಾಂತ್ ಬಿಜಾಪುರ್, ಶ್ರೀಶೈಲ್ ತೆಳಗಿದ, ಇನ್ನಿತರರು ಪಾಲ್ಗೊಂಡಿದ್ದರು.

ವರದಿ: ಕೃಷ್ಣ ಎಚ್. ರಾಠೋಡ




