Ad imageAd image

ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ: ವಿನಾಯಕ ಬಡಿಗೇರ

Bharath Vaibhav
ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ: ವಿನಾಯಕ ಬಡಿಗೇರ
WhatsApp Group Join Now
Telegram Group Join Now

ರಾಮದುರ್ಗ: ಎಲ್ಲರೂ ಶಾಂತಿ ಸೌಹಾರ್ದತೆ ಭಕ್ತಿ ಭಾವದಿಂದ ಹಬ್ಬಗಳನ್ನು ಆಚರಿಸಿ ಎಂದು ರಾಮದುರ್ಗ ಸಿಪಿಆಯ್ ವಿನಾಯಕ ಬಡಿಗೇರ ಹೇಳಿದರು ಅವರು ಮಂಗಳವಾರ ಸುರೇಬಾನ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಶಾಂತಿ ಸಭೆಯಲ್ಲಿ ಮಾತನಾಡಿ ಹಬ್ಬಗಳನ್ನು ಎಲ್ಲರೂ ಭಕ್ತಿ ಭಾವದಿಂದ ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಡೆದುಕೊಳ್ಳಬೇಕು ಅದು ಎಲ್ಲರಿಗೂ ಒಳ್ಳೆಯದು, ಆಚರಣೆಗಳು ಖುಷಿ ತರಬೇಕು ದುಃಖವನ್ನಲ್ಲ,ಆದ್ದರಿಂದ ಆಯೋಜಕರು ಯಾವುದೇ ಸಮಸ್ಯೆಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಿ ಎಸ್ ಆಯ್, ಎಸ್ ಎಚ್ ಪವಾರ ಅವರು ಮಾತನಾಡಿ ಎಲ್ಲರೂ ಶಾಂತಿಯಿಂದ ಹಬ್ಬಗಳನ್ನು ಆಚರಿಸಿ, ಯಾವುದೇ ಸಮಸ್ಯೆಗಳು ಆಗದಂತೆ ಸಹಕಾರ ನೀಡಿ ಎಂದರು.
ವೇಧಿಕೆಯಲ್ಲಿ ಸುರೇಬಾನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಶ್ರುಪಅಲಿ ಬಂದಗಿ, ಮುಖಂಡರಾದ ಶಿವಾನಂದ ಪಿಡ್ಡನ್ನವರ, ಪೊಲೀಸ್ ಅಧಿಕಾರಿಗಳಾದ ವಿ ವಿ ಮಳಲಿ, ಎಂ ಬಿ ಚೋಪದಾರ,ಸುರೇಬಾನ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಜರಿದ್ದರು.

ವರದಿ: ಕುಮಾರ ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!