Ad imageAd image
- Advertisement -  - Advertisement -  - Advertisement - 

ಶಾಂತಿಯುತವಾಗಿ ಗೌರಿ ಗಣೇಶ ,ಈದ್ ಮಿಲಾದ್ ಹಬ್ಬ ಆಚರಿಸಿ: ಸಿ.ಪಿ.ಐ ಶ್ರೀಶೈಲ ಕೌಜಲಗಿ

Bharath Vaibhav
ಶಾಂತಿಯುತವಾಗಿ ಗೌರಿ ಗಣೇಶ ,ಈದ್ ಮಿಲಾದ್ ಹಬ್ಬ ಆಚರಿಸಿ: ಸಿ.ಪಿ.ಐ ಶ್ರೀಶೈಲ ಕೌಜಲಗಿ
WhatsApp Group Join Now
Telegram Group Join Now

ಕಲಘಟಗಿ: -ಶಾಂತಿಯುತವಾಗಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಸರಕಾರದ ನಿರ್ದೇಶನದಂತೆ ಹಬ್ಬಗಳು ಪ್ರತಿಯೊಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವಂತಿರಬೇಕು ಯಾರಾದರೂ ಸಾರ್ವಜನಿಕ ಶಾಂತಿಗೆ ಭಂಗ ತಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿ.ಪಿ.ಐ ಶ್ರೀಶೈಲ ಕೌಜಲಗಿ ಮಾತನಾಡಿದರು.

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯ ಉದೇಶಿಸಿ ಮಾತನಾಡಿತ ಸರಕಾರ ಇಗಾಗಲೇ ಹಬ್ಬದ ಆಚರಣೆಗೆ ನಿರ್ದೇಶನಗಳನ್ನು ನೀಡಿದ್ದು ಗಜಾನನ ಉತ್ಸವ ಕಮೀಟಿಯವರು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೆಂಡಾಲ್ ನಿರ್ಮಿಸಬೇಕು ಪೆಂಡಾಲಗಳಲ್ಲಿ ಅವಘಡ ಸಂಬವಿಸದAತೆ ಎಚ್ಚರವಹಿಸಬೇಕು.

ಪೆಂಡಾಲ್‌ಗಳಲ್ಲಿ ಜೂಜು,ಎಸ್ಪೀಟ್ ಆಟಗಳನ್ನು ಆಡುವಂತಿಲ್ಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಬಾರದು, ಪಿ.ಓ.ಪಿ ನಿರ್ಮಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು,ಮೂರ್ತಿ ಪ್ರತಿಷ್ಠಾಪನೆಗೆ ಧ್ವನಿವರ್ದಕಗಳ ಬಳಕೆಗೆ ಅಧಿಕೃತವಾಗಿ ಪರವಾನಿಗೆ ಪಡೆಯಬೇಕು,ಹಸಿರು ಪಟಾಕಿ ಬಳಸಿ ಆಸ್ಪತ್ರೆ,ಶಾಲಾ ಕಾಲೇಜ ಅಕ್ಕಪಕ್ಕದಲ್ಲಿ ಪಟಾಕಿ ಸಿಡಿಸುವಂತಲ್ಲ ಸುಪ್ರೀಮ್ ಕೋರ್ಟ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು ,ಸುರಕ್ಷತೆ ದೃಷ್ಠಿಯಿಂದ ಪಟ್ಟಣದಾದ್ಯಂತ್ಯ ಸಿ.ಸಿ ಕ್ಯಾಮರಾ ಅಳವಡಿಸಲಾಗುವುದು ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಲಾಗುವುದು ಗಣೇಶ ವಿಸರ್ಜನೆಯ ರಸ್ತೆಯನ್ನು ಬದಲಿಸಬಾರದು,ಸಮಯದ ಅವಧಿಯಲ್ಲಿಯೇ ಗಣೇಶನ ವಿಸರ್ಜನೆ ಮಾಡಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ತಾಲೂಕಾ ತಹಶಿಲ್ದಾರ ವೀರೇಶ ಮುಳಗುಂದಮಠ ಮಾತನಾಡಿ ಸರಕಾರ ಸೂಚಿಸಿದ ನಿಯಮ ಪಾಲಿಸುವುದು ಕಡ್ಡಾಯ ತಪ್ಪಿದ್ದಲ್ಲಿ ಕ್ರಮ ಜರುಗಿಸಲಾಗುವುದು ನಿಗದಿತ ಸಮಯದಲ್ಲಿ ಪ್ರತಿಷ್ಠಾಪಿಸಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದರು.ಸಾರ್ವಜನಿಕರು ಪ.ಪಂ ಅಧಿಕಾರಿ ಶರಣಪ್ಪ ಇವರಿಗೆ ರಸ್ತೆ ಅಕ್ಕಪಕ್ಕದಲ್ಲಿನ ಗಿಡಗಂಟೆಗಳನ್ನು ತೆರವುಗೊಳಿಸಬೇಕು ಹಾಗೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು ವಿಸರ್ಜನೆಯ ಸ್ಥಳದಲ್ಲಿ ತೆಪ್ಪದ ವ್ಯವಸ್ಥೆ ಮಾಡುಬೇಕು ಎಂದರು.

ಸಭೆಯಲ್ಲಿ ಸದಾನಂದ ಚಿಂತ್ತಾಮಣ ,ಪ್ರಮೋದ ಪಾಲ್ಕರ,ಸುಧೀರ ಬೋಳಾರ, ಬಾಷಾಸಾಬ್ ಕಾರಿಗಾರ,ಫಕಿರೇಶ ನೇಸರೆಕರ, ಶೌಕತಲಿ ತೇರಗಾಂವ್, ಗುರುನಾಥ ದಾನವೇನವರ, ಪ.ಪಂ ಸದಸ್ಯರಾದ ವೃಷಬೇಂದ್ರೆ ಪಟ್ಟಣಶೆಟ್ಟಿ,ಗಂಗಾಧರ ಗೌಳಿ, ಬಸವರಾಜ ಕಡ್ಲಾಸ್ಕರ,ನಾರಾಯಣ ವಾಘ್ಮೋಡೆ,ಬಸವರಾಜ ಮಾದರ, ವಾಸು ಲಮಾಣ , ಹಸನಸಾಬ್ ಗಂಜಿಗಟ್ಟಿ,ಯಲ್ಲಪ್ಪ ಮೇಲಿನಮನಿ,ಶಶಿಧರ ಕಟ್ಟಿಮನಿ, ಪÀರಶುರಾಮ ಹುಲಿಹೊಂಡ,ಲಕ್ಷö್ಮಣ ಲಮಾಣ ,ಮಂಜು ಭೋವಿ,ಶಿವಾಜಿ ಡೆಂಬೆ ಅಗ್ನಿಶಾಮಕ ದಳದ ಸಿಬ್ಬಂದಿ ಪಟ್ಟಣದ ಗಜಾನನ ಉತ್ಸವ ಸಮಿತಿ ಸದಸ್ಯರು ಇದ್ದರು.ಚಿತ್ರ ಇದೆ ೨೨ಕೆ.ಎಲ್.ಜಿ೧ ಕಲಘಟಗಿ ಪಟ್ಟಣದ ಪ.ಪಂ ಸಭಾ ಭವನದಲ್ಲಿ ಕರೆದ ಗೌರಿ ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ತಾಲೂಕಿನ ಗಜಾನನ ಉತ್ಸವ ಸಮಿತಿ ಸದಸ್ಯರನ್ನು ಉದೇಶಿಸಿ ಸಿ.ಪಿ.ಐ ಶ್ರೀಶೈಲ ಕೌಜಲಗಿ ಮಾತನಾಡಿದರು.

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
Share This Article
error: Content is protected !!