Ad imageAd image

ಅದ್ದೂರಿಯಾಗಿ ಶ್ರೀರಾಮನವಮಿ ಅಚರಣೆ

Bharath Vaibhav
ಅದ್ದೂರಿಯಾಗಿ ಶ್ರೀರಾಮನವಮಿ ಅಚರಣೆ
WhatsApp Group Join Now
Telegram Group Join Now

ಪೀಣ್ಯ :-2ನೇ ಹಂತದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ.ಆನಂದ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಶ್ರೀರಾಮನವಮಿ ಅಚರಣೆ

ಪೀಣ್ಯ ದಾಸರಹಳ್ಳಿ ಕ್ಷೇತ್ರದ ಪೀಣ್ಯ 2ನೇ ಹಂತ ಬಸ್ ನಿಲ್ದಾಣ ಹತ್ತಿರ ಇರುವ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪ್ರದಾನ ಕಚೇರಿ ಮುಂಭಾಗದಲ್ಲಿ ಅದ್ದೂರಿಯಾಗಿ ಶ್ರೀರಾಮ ನವಮಿ ಆಚರಣೆಯನ್ನು ರಾಜ್ಯಾಧ್ಯಕ್ಷ ವಿ.ಆನಂದ್ ಅವರ ನೇತೃತ್ವದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮತ್ತು ಆಂಜನೇಯ ಪ್ರತಿಮೆಗಳಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಪುನಸ್ಕಾರ ಆಯೋಜಿಸಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ನಾಗರಾಜ್ ರವರು ಮಾತನಾಡಿ ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮನಿಗೆ ಸುವರ್ಣ ವಜ್ರಾಂಗಿ ಕವಚ, ಪುಷ್ಪಲಂಕಾರ, ವಸ್ತ್ರಾಲಂಕಾರ, ನವನೀತ ಅಲಂಕಾರ, ಸೀತಾ ಕಲ್ಯಾಣ ಅಲಂಕಾರ, ದ್ರಾಕ್ಷಿ ಗೋಡಂಬಿ ಅಲಂಕಾರ, ಧ್ಯಾನಲಂಕಾರ, ಶ್ರೀರಾಮ ಪಟ್ಟಾಭಿಷೇಕ , ಶಯನೋತ್ಸವ ಪ್ರತಿದಿನ ಒಂದೊಂದು ಅಲಂಕಾರದಲ್ಲಿ ಶ್ರೀರಾಮನನ್ನು ಶೃಂಗಾರಿಸಿ ಶ್ರೀರಾಮನಾ ಜನ್ಮದಿನದಂದು ಬರುವ ಭಕ್ತರಿಗೆ ಕೊಸಂಬರಿ, ಪಾನಕ ವಿತರಣೆ ಆಯೋಜಿಸಿದ್ದು ತುಂಬಾ ಖುಷಿ ತಂದಿದೆ ಎಂದು ಅನ್ನ ಸಂತರ್ಪಣೆಗೆ ಚಾಲನೆ ನೀಡಿ ವಿ.ನಾಗರಾಜ್ ಮಾತನಾಡಿದರು.

ರಾಜ್ಯಾಧ್ಯಕ್ಷ ವಿ.ಆನಂದ್ ಮಾತನಾಡಿ ನಮ್ಮ ಭಾರತೀಯರಿಗೆ ಹಿಂದೆಂದಿಗಿಂತಲೂ ಈ ವರ್ಷದ ರಾಮನವಮಿ ಭಾರತೀಯರಿಗೆ ಅತ್ಯಂತ ವಿಶೇಷವಾದದ್ದು. ರಾಮಲಲ್ಲಾ ಪುನಃ ಅಯೋಧ್ಯೆಯಲ್ಲಿ ವಿರಾಜಮಾನನಾದ ವರ್ಷವಿದು.ಐದು ಶತಮಾನಗಳ ಹೋರಾಟ ನನಸಾದ ವರ್ಷವಿದು. ಸರ್ವರೂ ಸುಖ, ಶಾಂತಿ, ಸಮೃದ್ಧಿಯಿಂದ ಬದುಕುವಂತಹ ರಾಮರಾಜ್ಯ ನಮ್ಮದಾಗಲಿ  ಮತ್ತು ಪ್ರತಿಯೋಬ್ಬರ ಹಿಂದುಗಳು ಶ್ರೀರಾಮನ ಮಹಿಮೆಯ ಪುಸ್ತಕಗಳು ಓದಿ ತಮ್ಮ ತಮ್ಮ ಮಕ್ಕಳಿಗೆ ಶ್ರೀರಾಮನ ಬಗ್ಗೆ ತಿಳಿಸಿರಿ ಎಂದು ರಾಜ್ಯಾಧ್ಯಕ್ಷ ವಿ.ಆನಂದ್ ನೆರೆದಿದ್ದ ಸಾವಿರಾರು ಜನರಿಗೆ ಸಲಹೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುಂಧರ್ ರಾಜನ್, ರವೀಂದ್ರ ಕುಮಾರ್ ಜಿಕೆಡಬ್ಲೂ ಲೇಔಟ್, ಗೋವಿಂದರಾಜು, ಕಾಂಗ್ರೆಸ್ ಮುಖಂಡ ಆನಂದ್, ಶಂಕರ್ ಫ್ರೆಂಡ್ಸ್ ಕಾಲೊನಿ, ಶ್ರೀಕಾಂತ್,ವಿಜಿ, ರವಿಕುಮಾರ್, ಗುಂಡಾ,ನಾಗಾ, ಶಿವಾ, ಮಹಿಳಾ ಮುಖ್ಯಸ್ಥೆ ಲತಾ ಕೆ.ಎಸ್. ಸೇರಿದಂತೆ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಸಂಘದ ಪದಾಧಿಕಾರಿಗಳು ಸದಸ್ಯರು ಕಾರ್ಯಕರ್ತರು ಮತ್ತು ಶ್ರೀರಾಮನ ಭಕ್ತಾದಿಗಳು ಇದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!