ಚೇಳೂರು: ತಾಲ್ಲೂಕಿನಲ್ಲಿ ಇಂದು ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿಕೊಳ್ಳಬೇಕು ಎಂದು ಚೇಳೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರೀಶ್ ರವರು ಮಾತನಾಡಿ ಯಾವುದೇ ಅಹಿತಕಾರಿ ಘಟನೆ, ಗಲಾಟೆ, ಅಥವಾ ಮೆರವಣಿಗೆಯ ಮೂಲಕ ನಮಾಜ್ ಮಾಡಲು ಈದ್ಗ ಗೆ ತೆರಳುವ ಸಮಯದಲ್ಲಿ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ಡ್ರೈವಿಂಗ್ ಅಥವಾ ವಿಲಿಂಗ್, ಅತಿವೇಗವಾಗಿ ಚಲಾಯಿಸುವ ರವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುನ್ನಚ್ಚೇರಿಕೆಯ ಕ್ರಮವನ್ನು ಮುಸ್ಲಿಂ ಬಾಂಧವರಲ್ಲಿ ಹಂಚಿಕೊಂಡರು.

ಅದೇ ರೀತಿ ಮಸೀದಿಯ ಹಿರಿಯರಾದ ಕಮ್ಮಚೆರುವು ವಲೀಸಾಬ್, ಕಲೀಂಮುಲ್ಲಾ, ನಯಾಜ್ ಮೆಕ್ಯಾನಿಕ್,ಮುನ್ನ ಸ್ಟುಡಿಯೋ,ಫಾತಿಮಾ, ರಿಜ್ವಾನ್, ಸಾದಿಕ್ ಸೈಬರ್, ಖಾದರ್ ವಲಿ, ಚಾಂದ್ ಭಾಷಾ ಹಾಗೂ ಎಲ್ಲಾ ಮಸೀದಿಯ ಕಮಿಟಿಯ ಸಿಬ್ಬಂದಿಗಳು ಹಾಜರಿದ್ದರು,
ವರದಿ :ಯಾರಬ್. ಎಂ.




