
—————————————ಬೇಡಕಿಹಾಳದಲ್ಲಿ ನಡೆದ ಶಾಂತಿಸಭೆಯಲ್ಲಿ ಪಿ.ಎಸ್.ಐ ಶಿವಕುಮಾರ ಬಿರಾದಾರ
ನಿಪ್ಪಾಣಿ: ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಧ್ವನಿವರ್ಧಕ ಡಾಲ್ಬಿ ಹಚ್ಚಬಾರದೆಂದು ಈಗಾಗಲೇ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಸರ್ವ ಗಣೇಶ ಮಂಡಳಿದವರು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ್ ವಿಸರ್ಜನೆ ವೇಳೆಗೆ ಮಧ್ಯಪಾನ ಮಾಡಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ನಿರ್ಧಾಕ್ಷನ್ಯ ಕ್ರಮವಿಸಲಾಗುವುದು ಎಂದು ಸದಲಗ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ಬಿರಾದಾರ್ ಗಣೇಶ್ ಮಂಡಳದವರಿಗೆ ಖಡಕ್ ಎಚ್ಚರಿಕೆ ನೀಡಿದರು.
ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ರವಿವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆಗೆ ಪೊಲೀಸ್ ಸಿಬ್ಬಂದಿ ಪುಂಡಲೀಕ ಲಮಾಣಿ ಮಾತನಾಡಿ * ಸಾರ್ವಜನಿಕ ಗಣೇಶ ಸ್ಥಾಪನೆ ವೇಳೆಗೆ ಸುರಕ್ಷಿತ ಸ್ಥಳ ಆಯ್ಕೆ ಮಾಡಿಕೊಂಡು ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ನಂತರ ಹೆಸ್ಕಾಂ ಹಾಗೂ ಪೊಲೀಸ ಇಲಾಖೆಯ ಅನುಮತಿ ಪಡೆಯಬೇಕು.
ಗಣೇಶ್ ವಿಸರ್ಜನೆ ಸಮಯದಲ್ಲಿ ಶಾಂತಿಯುತವಾಗಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಭಕ್ತಿ ಭಾವೈಕ್ಯತೆಯಿಂದ ಗಣೇಶನನ್ನು ವಿಸರ್ಜಿಸಿ ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ಇದೇ ವೇಳೆ ಆರ್ ಜಿ ಡೋಮನೆ, ಪ್ರಶಾಂತ ಪಾಟೀಲ್ ಮಾತನಾಡಿದರು. ಸಭೆಯಲ್ಲಿ ವಿಫುಲ್ ಸಮಗೆ, ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಜಾದವ್ ದಯಾನಂದ್ ಚೌಗಲೆ, ಅನಿಲ ಗೋಸಾವಿ, ಪೊಲೀಸ್ ಸಿಬ್ಬಂದಿಗಳಾದ ಎಸ್.ಎ. ಜಮಕೋಳಿ, ಸಿ. ಎಲ್. ಪೂಜಾರಿ ಸೇರಿದಂತೆ ಮಂಡಳದ ಸದಸ್ಯರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




