ಸೇಡಂ:- ದೇವಕುಮಾರ್ ನಾಟೇಕರ್ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಮಿಕ ಘಟಕ ತಾಲೂಕ ಅಧ್ಯಕ್ಷರು ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇಡಂ ಪಟ್ಟಣದಲ್ಲಿರುವ ಕೃಪಾ ಅನಾಥಾಶ್ರಮದಲ್ಲಿರುವ 30ಕ್ಕೂ ಹೆಚ್ಚು ಮಕ್ಕಳಿಗೆ ಕಾಪಿ ಪೆನ್ನು ಕೊಟ್ಟು ವಿಶೇಷವಾಗಿ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾಕ್ಟರ್ ರಾಮಚಂದ್ರ ಗುತ್ತೇದಾರ ಮಾತಾಡಿ ಹುಟ್ಟಬ್ಬಗಳು ಕೇವಲ ಕೇಕ್ ಕಟ್ ಮಾಡುವುದರ ಮುಖಾಂತರ ಆಚರಣೆ ಮಾಡದೆ ಅನಾಥ ಮಕ್ಕಳಿಗೆ ಸರಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಪುಸ್ತಕಗಳು ಕೊಡುವುದರ ಮುಖಾಂತರ ಅನಾಥರಿಗೆ ವಸ್ತ್ರಗಳು ಕೊಡುವುದರ ಮುಖಾಂತರ ಆಚರಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹೇಶ್ ರೆಡ್ಡಿ ಬಟೇಗಿರಾ, ಶ್ರೀನಿವಾಸ ರೆಡ್ಡಿ, ಕಿರಣ್ ಕುಮಾರ್ ಪಾಟೀಲ್, ಮಹೇಶ್ ರೆಡ್ಡಿ ಜಾಕನಪಲ್ಲಿ, ಗುಂಡಪ್ಪ ಪೂಜಾರಿ, ಚಂದ್ರಶೇಖರ್ ಮಡಿವಾಳ, ರಘುವೀರ್, ಪವನ್ ಕುಲಕರ್ಣಿ, ಇನ್ನು ಅನೇಕ ಕರವೇ ಸೈನಿಕರು ಹಾಜರಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.




