ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹಾಗೂ ಹಸಿರುಕ್ರಾಂತಿಯ ಪ್ರತಿಪಾದಕರಾಗಿರುವ ಡಾ ಬಾಬು ಜಗಜೀವನ್‌ರಾಂ 119 ನೇ ಅವರ ಜಯಂತಿಯನ್ನು ಬೆಳ್ಳಟ್ಟಿಯ ಪ್ರವಾಸಿ ಮಂದಿರದಲ್ಲಿ ಆಚರಿಸಲಾಯಿತು.
ಏಪ್ರಿಲ್ 5 ರಾಷ್ಟ್ರೀಯ ಸಮಾನತೆಯ ದಿನ ಸ್ವತಂತ್ರ ಹೋರಾಟಗಾರ ಹಸಿರು ಕ್ರಾಂತಿ ಹರಿಕಾರ ಭಾರತ ದೇಶದ ಮಾಜಿ ಉಪ ಪ್ರಧಾನಮಂತ್ರಿ ಬಾಬೂಜಿ ಎಂದೇ ಪ್ರಖ್ಯಾತರಾದ ಡಾಕ್ಟರ್ ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ರಾಷ್ಟ್ರೀಯ ಸಮಾನತೆಯ ದಿನ ಎಂದು ಆಚರಿಸಲಾಗುತ್ತದೆ
ಇವರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದವರು ಸಂವಿಧಾನ ರಚನೆಲ್ಲಿ ಪ್ರಮುಖ ಪಾತ್ರ ವಹಿಸಿದವರು ಮತ್ತು ಸ್ವತಂತ್ರ ಭಾರತ ಸರ್ಕಾರದಲ್ಲಿ ಅನೇಕ ಮಂತ್ರಿ ಖಾತೆಗಳನ್ನು ನಿರ್ವಹಿಸಿದವರು ಸ್ವತಂತ್ರ ಭಾರತದ ಮೊದಲ ಕಾರ್ಮಿಕ ಸಚಿವ ರಾಗಿ ಕಾರ್ಯನಿರ್ವಹಿಸಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಭಾರತದ ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ರೈತರ ಹಸಿವು ನೀಗಿಸಿದ ಮಹಾನ್ ಶಕ್ತಿ ಇವರು ಹೊಲದಲ್ಲಿ ಬೆಳೆ ಬೆಳೆದರೆ ಸಾಲದು, ಸಮಾಜದಲ್ಲಿ ಸಮಾನತೆ ಬೆಳೆಯಬೇಕು ಎಂಬುದು ಇವರ ಆಶಯವಾಗಿತ್ತು ದುರಂತವೆಂದರೆ ಇಂದಿಗೂ ರೈತರಿಗಾಗಿ ಕಾರ್ಮಿಕರಿಗಾಗಿ ಅಹೋರಾತ್ರಿ ಶ್ರಮಿಸಿದ ಬಾಬೂಜಿ ಯವರನ್ನು ಕೇವಲ ಜಾತಿಯ ಕಾರಣಕ್ಕಾಗಿ ಸರಿಯಾಗಿ ಗೌರವಿಸುತ್ತಿಲ್ಲ ಇದು ಬದಲಾಗಬೇಕು ಎಂದು ವಕೀಲರಾದ ಮೈಲಾರಪ್ಪ ಡಿ ಎಚ್ ಹೇಳಿದರು
ಕೋಟೇಶ ಪೂಜಾರ ಮಾತನಾಡಿ ರೈತರ ಹಾಗೂ ಕಾರ್ಮಿಕರ ಪಾಲಿನ ನಿಜವಾದ ಆಶಾಕಿರಣವಾದ ಇವರನ್ನು ಜಾತಿ ಧರ್ಮಗಳ ಭೇದ ಮರೆತು ಪ್ರತಿಯೊಬ್ಬ ರೈತರು ಕಾರ್ಮಿಕರು ಪೂರ್ಣವಾಗಿ ಗೌರವಿಸೋಣ .ಶ್ರಮಜೀವಿಗಳ ಬದುಕಿನಲ್ಲಿ ಬೆಳಕು ತಂದ ಈ ಮಹಾನ್ ಚೇತನಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ
ಡಾ.ಬಾಬು ಜಗಜೀವನ ರಾಂ ಅವರು ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡಿ ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿಗೆ ಕಾರಣೀಕರ್ತರಾದರು ಎಂದು ಬಣ್ಣಿಸಿದರು
ನಂತರ ಮಾತನಾಡಿದ ಪಿ ಎಸ್ ಐ ನಿಹಾಲ್ ನದಾಫ್ ಅವರು ಅಸ್ಪ್ರಶ್ಯತೆ ಮತ್ತು ಅಸಮಾನತೆ ವಿರುದ್ಧ ಜೀವಮಾನದುದ್ದಕ್ಕೂ ಹೋರಾಡಿದ ಅಪ್ರತಿಮ ನಾಯಕ ಬಾಬೂಜಿ 3 ಬಾರಿ ಪ್ರಧಾನಿಯಾಗುವ ಮತ್ತು ಒಮ್ಮೆ ರಾಷ್ಟ್ರಪತಿಯಾಗುವ ಅವಕಾಶವನ್ನು ಕಳೆದುಕೊಂಡ ದುರಂತ ನಾಯಕ ಆದರೆ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಸತತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿ ನೇತಾರರಾಗಿ ಗುರುತಿಸಿಕೊಂಡಿದ್ದಾರೆ ಅಪ್ರತಿಮ ರಾಷ್ಟ್ರಭಕ್ತರಾಗಿ ದೇಶಕ್ಕಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು ಕಾರ್ಮಿಕ ಸಚಿವರಾಗಿ ಕಾರ್ಮಿಕರ ಏಳಿಗೆ ಸಾರಿಗೆ ಸಂಪರ್ಕ ವಿಮಾನಯಾನ ಇಲಾಖೆ ಮಾತ್ರವಲ್ಲದೇ ಕೃಷಿ ಸಚಿವರಾಗಿ ಹಸಿವು ಮುಕ್ತ ಭಾರತ ನಿರ್ಮಾಣದ ಪ್ರಮುಖ ಕರ್ತೃವಾಗಿ ಇಂದಿಗೂ ಗುರುತಿಸಲ್ಪಡುತ್ತಾರೆ ಸಮಸ್ಯೆಗಳು ಎದುರಾದಾಗ ಟ್ರಬಲ್ ಶೂಟರ್ ಆಗಿ ಸಮಸ್ಯೆಗಳ ಪರಿಹಾರಕ್ಕೆ ಸೂತ್ರಗಳನ್ನು ನೀಡುತ್ತಿದ್ದರು ಅವರ ರಾಜಕೀಯ ಜೀವನ ಭಾರತದ ಅಭಿವೃದ್ಧಿ ಸಮಾನತೆ ಮತ್ತು ದಾರಿದ್ರ್ಯ ನಾಶದ ಗುರಿಯನ್ನು ಹೊಂದುವ ಮೂಲಕ ಕಲ್ಯಾಣ ಭಾರತದ ಕನಸನ್ನು ಕಂಡು ಅದಕ್ಕಾಗಿ ದುಡಿದ ಮೇರುನಾಯಕ ಎಂದು ಸ್ಮರಿಸಿದರು
ಈ ಸಂಧರ್ಭದಲ್ಲಿ ಅಣ್ಣಪ್ಪ ಗುತ್ತೆಮ್ಮನವರಿಗೆ ಆನಂದ ಸತ್ಯಮ್ಮನವರ ಗೌತಮ ಹಲ್ಲೆಮ್ಮನವರ ಹಣಮಂತ ಹರಿಜನ ಹಣಮಂತ ಗುತ್ತೆಮ್ಮನವರ ನವೀನ್ ಗುತ್ತೆಮ್ಮನವರ ಸುಯುಲ್ ನದಾಫ್ ಅಜಯ್ ಕೊಪ್ಪೆ ವಿನಾಯಕ ಕಲಾಲ್ ಉದಯ ಕಡೆಮನಿ ಆನೆಕೆ ಯುವಕ ಉಪಸುತರಿದ್ದರು..
ವರದಿ :ಅಣ್ಣಪ್ಪ ಗುತ್ತೆಮ್ಮನವರ




