Ad imageAd image

ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಎನ್.ಮಹೇಶ್ ಹುಟ್ಟುಹಬ್ಬ ಆಚರಣೆ

Bharath Vaibhav
ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಎನ್.ಮಹೇಶ್ ಹುಟ್ಟುಹಬ್ಬ ಆಚರಣೆ
WhatsApp Group Join Now
Telegram Group Join Now

ಯಳಂದೂರು:-ಪಟ್ಟಣದಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್‌ ರವರ 68ನೇ ವರ್ಷದ ಹುಟ್ಟಹಬ್ಬವನ್ನು ಅವರ ಕಾಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಣೆ ಮಾಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.ಪಟ್ಟಣದಲ್ಲಿ ಮಾಜಿ ಶಾಸಕ ಎನ್.ಮಹೇಶ್ ರವರು ನಿರ್ಮಿಸಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು…

ಕ್ಷೇತ್ರದ ವಿವಿಧ ಗ್ರಾಮದ ಮುಖಂಡರು ಅಧಿಕಾರಿಗಳು, ಅಭಿಮಾನಿಗಳು, ಸಂಘ ಸಂಸ್ಥೆಯವರು ಹಾಗೂ ಬಿಜೆಪಿ ಕಾರ್ಯಕರ್ತರು ಆಗಮಿಸಿ ಶಾಸಕರಿಗೆ ಶಾಲು, ಹಾರ, ಮೈಸೂರು ಪೇಟ ಹಾಕುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದರು…

ನಂತರ ಬೆಂಗಳೂರು ಆನೇಕಲ್ ನ ಗ್ರಾಮ ಪಂಚಾಯತಿ ಸದಸ್ಯ ನರೇಂದ್ರ ಕುಮಾರ್ ರವರು ಮಾತನಾಡಿ ಈ ದಿನ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅಣ್ಣ ಎನ್. ಮಹೇಶ್ ರವರ 68ನೇ ವರ್ಷದ ಹುಟ್ಟುಹಬ್ಬವನ್ನು ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ವಿತರಣೆ ಮಾಡಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.

ಹುಟ್ಟು ಹಬ್ಬದ ಪ್ರಯುಕ್ತ ಇಂದು ವಿಶೇಷವಾಗಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಯಳಂದೂರು ತಾಲೂಕು ಆಸ್ಪತ್ರೆ, ಕೊಳ್ಳೇಗಾಲ ತಾಲೂಕು, ಆಸ್ಪತ್ರೆ ಹಾಗೂ ಸಂತೆಮರಹಳ್ಳಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಅಣ್ಣ ಎನ್. ಮಹೇಶ್ ರವರಿಗೆ ಭಗವಂತ ಆಯಸ್ಸು, ಆರೋಗ್ಯ ಭಾಗ್ಯ, ಬುದ್ಧ,ಬಸವ, ಅಂಬೇಡ್ಕರ್ ಹಾಗೂ ಪುಲೆ, ಸಾಹು, ನಾಲ್ವಡಿ ರವರ ಆಶೀರ್ವಾದ ಸದಾ ಅವರ ಮೇಲೆ ಇರಲಿ, ಇನ್ನು ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ತುಂಬಲಿ ಎಂದು ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!