Ad imageAd image
- Advertisement -  - Advertisement -  - Advertisement - 

ಅಗಸ್ಟ್ 06 ರಂದು ನ್ಯಾಷನಲ್ ವಾಸ್ಕ್ಯುಲರ್ ಡೇ ಆಚರಣೆ: ಡಾ.ಶಶಾಂಕ್ ಕರಿ

Bharath Vaibhav
ಅಗಸ್ಟ್ 06 ರಂದು ನ್ಯಾಷನಲ್ ವಾಸ್ಕ್ಯುಲರ್ ಡೇ ಆಚರಣೆ: ಡಾ.ಶಶಾಂಕ್ ಕರಿ
WhatsApp Group Join Now
Telegram Group Join Now

ಹುಬ್ಬಳ್ಳಿ:-ರಕ್ತನಾಳ ಸಂಬಂಧಿ ಕಾಯಿಲೆಗಳು ಇತ್ತಿಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೌ.ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್ ವತಿಯಿಂದ “ನ್ಯಾಷನಲ್ ವಾಸ್ಕ್ಯುಲರ್ ಡೇ’ ಅನ್ನು ಅಗಸ್ಟ್ 6 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಭಾಗ್ಯಾಪ್ಲಾಜಾ ಬಳಿಯ ಸೌ.ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್’ನಲ್ಲಿ ಆಚರಿಸಲಾಗುತ್ತಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಶಶಾಂಕ್ ಕರಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, 1994 ರಿಂದ ಅಗಸ್ಟ್ 6 ರಂದು ರಾಷ್ಟ್ರೀಯ ವಾಸ್ಕ್ಯುಲರ್ ಡೇ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಇದೀಗ 30ನೇ ರಾಷ್ಟ್ರೀಯ ವಾಸ್ಕ್ಯುಲರ್ ಡೇ ಆಚರಿಸಲಾಗುತ್ತಿದೆ. ಪ್ರತಿವರ್ಷ ಒಂದೊಂದು ಥೀಮ್’ದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುವುದು. ಈ ವರ್ಷ ‘Ambutation free world’ ಥೀಮ್’ದೊಂದಿಗೆ ಆಚರಿಸಲಾಗುತ್ತಿದೆ. ಏಕೆಂದರೆ ಇದು ರೋಗಗಳನ್ನು ತಪ್ಪಿಸಲು ಮತ್ತು ಅಂಗಚ್ಛೇದನವನ್ನು ತಡೆಯಲು ಸಹಾಯ ಮಾಡುತ್ತದೆ ಎಂದರು.

ಆಧುನಿಕ ದಿನಮಾನದಲ್ಲಿ ಬಹಳಷ್ಟು ಯುವಕರು ಧೂಮಪಾನದ ಚಟಕ್ಕೆ ಒಳಗಾಗುತ್ತಿದ್ದಾರೆ. ವ್ಯಾಯಾಮದ ಕೊರತೆಯಿಂದ ರಕ್ತನಾಳದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಈ ದಿಸೆಯಲ್ಲಿ ರಕ್ತನಾಳ ಸಂಬಂಧಿ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ರಕ್ತನಾಳ ತೊಂದರೆಯಿಂದ ಮನುಷ್ಯನಿಗೆ ಆನೆಯ ಕಾಲು, ಊದಿಕೊಂಡ ಕಾಲು, ಉಬ್ಬಿರುವ ರಕ್ತನಾಳಗಳು, ನಿರ್ಬಂಧಿಸಿದ ಅಪಧಮನಿ (ಬ್ಲಾಕ್ ಆರ್ಟರಿ) ಸೇರಿದಂತೆ ಅನೇಕ ತೊಂದರೆಗಳು ಉಂಟಾಗುತ್ತಿವೆ. ಇವುಗಳನ್ನು ನಿರ್ಲಕ್ಷ್ಯ ವಹಿಸಿದರೇ ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತವೆ. ಇಂತಹ ರೋಗಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ ಕೂಡಾ ಲಭ್ಯವಿದೆ. ಆದರೆ ದೇಶದಲ್ಲಿ ತಜ್ಞ ವೈದ್ಯರ ಪ್ರಮಾಣ ಅತಿಕಡಿಮೆ ಎಂದು ಹೇಳಬಹುದು. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಸೌ.ಮಂದಾಕಿನಿ ಮೆಮೊರಿಯಲ್ ಕ್ಲಿನಿಕ್’ನಲ್ಲಿ ಪ್ರತ್ಯೇಕ ವಿಭಾಗ ರಚಿಸಿ ಕಳೆದ ಒಂದು ವರ್ಷದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ರಾಷ್ಟ್ರೀಯ ವಾಸ್ಕ್ಯುಲರ್ ಡೇ ಅಂಗವಾಗಿ ಆಸ್ಪತ್ರೆಯಲ್ಲಿ ಮುಂದಿನ ಒಂದು ತಿಂಗಳು ದೇಶ ರಕ್ಷಣೆ ಮಾಡುವ ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಕ್ಕೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಅಂದಿನ ಆಚರಣೆಯಲ್ಲಿ ನಗರದ ಖ್ಯಾತ ಡಯಾಬಿಟಿಸ್ ವೈದ್ಯರಾದ ಡಾ.ಸುನೀಲ್ ಕರಿ ಸೇರಿದಂತೆ ಇನ್ನಿತರ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಸುನಿಲ್ ಕರಿ ಪಾಲ್ಗೊಂಡಿದ್ದರು.

ವರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
Share This Article
error: Content is protected !!