ಬೆಂಗಳೂರು: ನಗರದ ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ೪೩ನೇ ವಾರ್ಷಿಕೋತ್ಸವ ಹಾಗೂ ಸಂಕ್ರಾಂತಿ ಸಮ್ಮಿಲನ ಕಾರ್ಯಕ್ರಮವನ್ನು ಮಾಗಡಿ ರಸ್ತೆ ಗೊಲ್ಲರಹಳ್ಳಿಯಲ್ಲಿ ಸಂಘದ ಅಧ್ಯಕ್ಷ ನಾಗೇಂದ್ರ ಜಿ ಕಮ್ಮಾರ್, ಕಾರ್ಯಾಧ್ಯಕ್ಷ ಬಸವರಾಜ್ ಎಸ್ ಬಡಿಗೇರ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಸಂಘದ ೪೩ನೇ ವಾರ್ಷಿಕೋತ್ಸವ ಹಾಗೂ ಸಂಕ್ರಾಂತಿ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಶ್ವಕರ್ಮ ಧ್ವಜಾರೋಹಣ, ಸಂಘದ ನಿವೇಶನದ ಆವರಣ ಮತ್ತು ನೂತನ ಕೊಠಡಿ ಉದ್ಘಾಟನೆ ಶ್ರೀಶ್ರೀ ಅಭಿನವ ಯಚ್ಚರೇಶ್ವರ ಸ್ವಾಮಿಗಳು ಗವಿಮಠ ಶಿರೋಳ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮತ್ತು ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ.
ವಿಶೇಷವಾಗಿ ಕರ್ನಾಟಕ ಸರ್ಕಾರದ ವಿಶ್ವಕರ್ಮ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಬಾಬು ಪತ್ತಾರ್, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಮಾಳಿಗಾಚಾರ್ ಎಸ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಬಡಿಗೇರ್ ರಥ ಶಿಲ್ಪಿಗಳು, ಮತ್ತು ವಿದ್ವಾನ್ ಶಾಸ್ತ್ರಿ ಡಾ. ವೀರಾಚಾರ್ಯ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಕವಿತಾ ಆಚಾರ್ಯ, ಉಪಸ್ಥಿತರಿದ್ದರು.
ಸಂಕ್ರಾಂತಿ ಸಮ್ಮಿಲನದ ಪ್ರಯುಕ್ತ ಉತ್ತರ ಕರ್ನಾಟಕದ ವಿಷೇಶ ಊಟ ಜೋಳದ, ಸಜ್ಜೆ ರೊಟ್ಟಿ, ಬೆಳೆ ಮತ್ತು ಶೇಂಗಾ ಹೋಳಿಗೆ, ಎಣ್ಣೆ ಬದನೆಕಾಯಿ ಪಲ್ಯ, ಕಡಲೆ ಹಿಟ್ಟು (ಪಿಟ್ಲಾ), ಮೆಣಸಿನಕಾಯಿ ಬಜ್ಜಿ, ಸಾರು,ಮೊಸರು, ಶೇಂಗಾದ ಹಿಂಡಿ(ಪುಡಿ ಚಟ್ನಿ)ಅಗಸೆ ಹಿಂಡಿ(ಪುಡಿ ಚಟ್ನಿ) ಹೀಗೆ ವಿವಿಧ ಪದಾರ್ಥಗಳ ಊಟ ಮತ್ತು ಸಾಯಂಕಾಲದ ನಾಸ್ಟಾಕ್ಕೆ ಮಂಡಕ್ಕಿ ಮೆಣಸಿನಕಾಯಿ ಬಜ್ಜಿ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಶ್ವಕರ್ಮ ಸಮಾಜದ ಮುಖಂಡರು ಮಹಿಳೆಯರು ಕಾರ್ಯಕರ್ತರು ಆಗಮಿಸಿದರು.
ವರದಿ: ಅಯ್ಯಣ್ಣ ಮಾಸ್ಟರ್