Ad imageAd image

ಒಳ ಮಿಸಲಾತಿ ಜಾರಿ: ಗೋಕಾಕದಲ್ಲಿ ಮಾದಿಗರಿಂದ ಸಂಭ್ರಮಾಚರಣೆ

Bharath Vaibhav
ಒಳ ಮಿಸಲಾತಿ ಜಾರಿ: ಗೋಕಾಕದಲ್ಲಿ ಮಾದಿಗರಿಂದ ಸಂಭ್ರಮಾಚರಣೆ
WhatsApp Group Join Now
Telegram Group Join Now

ಗೋಕಾಕ: ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮಾದಿಗರ ಒಳಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಾ ಮಾದಿಗರು ಪಟಾಕಿ ಹಚ್ಚಿ ಶ್ರೀ ಬಸವೇಶ್ವರ ಪುತ್ಥಳಿಗೆ ಮತ್ತು ಡಾ: ಬಿ. ಆರ್.  ಅಂಬೇಡ್ಕರ ಪುತ್ಥಳಿಗೆ ಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.

ಮಾದಿಗ ಮುಖಂಡ ಸತೀಶ ಹರಿಜನ ಮಾತನಾಡಿ ನಿನ್ನೆ ದಿನ ನಡೆದ ವಿಶೇಷ ಸಚಿವ ಸಂಪುಟದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾಂಗ್ರೇಸ್ ಸರ್ಕಾರ ಮಾದಿಗರಿಗೆ ಮಾತು ಕೊಟ್ಟಂತೆ ಒಳಮೀಸಲಾತಿ ಜಾರಿ ಮಾಡಿದ್ದು ಸಂತಸ ತಂದಿದೆ.

ಆದರೂ ಸಹ ಎಡಗೈ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಮಿಸಲಾತಿ ದೊರಕಿಲ್ಲ ಆದರೂ ಸಂತಸದ ಸುದ್ದಿಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನೀಡಿದ್ದಕ್ಕೆ ಅಬಿನಂದಿಸಿದರು. ಮಾದಿಗ ಮುಖಂಡ ವಿಠ್ಠಲ ಸಣ್ಣಕ್ಕಿ ಮಾತನಾಡಿ ನಮ್ಮ ಹಿರಿಯರ ಪ್ರಾಣ ತ್ಯಾಗ,ಹೊರಾಟದಿಂದ ಇವತ್ತು ಎಡಗೈ ಸಮಾಜದರಿಗೆ ಒಳ ಮಿಸಲಾತಿ ದೊರಕಿದೆ.

ಇನ್ಮುಂದೆ ಎಡಗೈ ಸಮಾಜದವರು ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣ ಕಲಿತು ಭವಿಷ್ಯ ಉಜ್ವಲ ಮಾಡಿಕೊಂಡಾಗ ಮಾತ್ರ ಒಳಮಿಸಲಾತಿ ತರುವ ಹೊರಾಟಕ್ಕೆ ಜಯ ಸಿಕ್ಕಿದ್ದು ಪ್ರಯೋಜನವಾಗುತ್ತದೆ ಎಂದರು.

ಇನ್ನು ಇದೆ ರೀತಿ ಬಾಳೇಶ ಸಂತವ್ವಗೋಳ ಇವರು ಎಲ್ಲ ಪಕ್ಷಗಳು ಮಾದಿಗರಿಗೆ ಒಳ ಮಿಸಲಾತಿ ನೀಡುತ್ತೇವೆಂದು ಭರವಸೆ ನೀಡಿ ಸರಕಾರ ರಚನೆಯಾದ ನಂತರ ಮರೆತು ಬಿಟ್ಟಂತೆ ಕಾಂಗ್ರೇಸ್ ಸರಕಾರ ಒಳಮಿಸಲಾತಿ ನೀಡಿ ನುಡಿದಂತೆ ನಡೆದುಕೊಂಡಿದೆ,ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾದಿಗ ಸಮಾಜದ ವತಿಂದ ಅಬಿನಂದನೆ ಹೇಳಿದರು.

ಈ ಸಂದರ್ಬದಲ್ಲಿ ಗೋಕಾಕ ತಾಲೂಕಾ ಮಾದಿಗ ಸಮುದಾಯದ ಮುಖಂಡರುಗಳಾದ ಗೊವಿಂದ ಕಳ್ಳಿಮನಿ, ಬಸವರಾಜ ಮೇಸ್ತ್ರಿ,ರಮೇಶ ಹರಿಜನ , ರವಿ ಕಡಕೋಳ,ಸಂಜು ಹೊಸಮನಿ,ದೊಡ್ಡವ್ವ ತಳಗೇರಿ.ವಿನೋದ ಮೇತ್ರಿ ಸೇರಿದಂತೆ ಇನ್ನೂಳಿದ ಮುಖಂಡರು ಹರ್ಷ ವ್ಯಕ್ತಪಡಿಸಿದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!