————————————–ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆ
ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆಯನ್ನು ಜಯಗಳಿಸಿದ್ದ ಸ್ವಾಭಿಮಾನ ಪೆನಲ್ ಅಭ್ಯರ್ಥಿಗಳು ಮಾಧ್ಯಮದೊಂದಿಗೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.
ಜಯಗಳಿಸಿದ ಸ್ವಾಭಿಮಾನ ಪೆನಲ್ ಅಭ್ಯರ್ಥಿಗಳಾದ ಮಹಾವೀರ ವಸಂತ ನೀಲಜಗಿ ಹಾಗೂ ಮೆಹಬೂಬಿ ಗೌಸ್ ಲಾಜಿಮ್ ನಾಯಕವಾಡಿ ಅವರು ಮಾಧ್ಯಮದೊಂದಿಗೆ ಚುನಾವಣೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.
ಮಾಜಿ ಸಂಸದರಾದ ರಮೇಶ ಕತ್ತಿ ಮಾಜಿ ಸಚಿವರಾದ ಎ ಬಿ ಪಾಟೀಲ ಶಾಸಕರಾದ ನಿಖಿಲ್ ಕತ್ತಿ ಅವರ ನೇತೃತ್ವದಲ್ಲಿ ಸ್ವಾಭಿಮಾನ ಪೆನಲ್ 15/15 ಅಭ್ಯರ್ಥಿಗಳು ಜಯಗಳಿಸಿದ್ದೇವೆ.
ಇದು ಒಂದು ಹುಕ್ಕೇರಿ ಮತಕ್ಷೇತ್ರದ ಬಾಂಧವರಿಗೆ ಸ್ವಾಭಿಮಾನ ಬಳಗದವರಿಗೆ ಹಾಗೂ ನಮ್ಮ ಸಂಸ್ಥೆ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇವೆ ಎಂದು ಮಹಾವೀರ ನೀಲಜಿಗಿ ಅವರು ಹೇಳಲಾಯಿತು.
ಹಾಗೂ ಮತ್ತೊಬ್ರ ಅಭ್ಯರ್ಥಿಯಾದ ಗೌಸ್ ಲಾಜಿಮ್ ನಾಯಕವಾಡಿ ಅವರು ಕೂಡ ಈ ರೀತಿ ಸಂತೋಷವನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಯಿತು ಮಾಜಿ ಸಚಿವರಾದ ಎ ಬಿ ಪಾಟೀಲ ಹಾಗೂ ಮಾಜಿ ಸಂಸದರಾದ ರಮೇಶ್ ಕತ್ತಿ ನೇತೃತ್ವದಲ್ಲಿ ನಾವು ಎಲ್ಲರೂ ಒಟ್ಟುಗೂಡಿ ಜನರ ಸೇವೆಯನ್ನು ಮಾಡುತ್ತೇವೆ ಎಲ್ಲರೂ ಹುಕ್ಕೇರಿ ಮತಕ್ಷೇತ್ರ ಜನರಿಗೆ ಚಿರಋಣಿಯಾಗಿ ಇರುತ್ತೇವೆ ಎಂದು ಗೌಸ್ ಲಾಜಿಮ್ ನಾಯಕವಾಡಿ ಮಾಧ್ಯಮದೊಂದಿಗೆ ಹೇಳಿದರು.
ವರದಿ: ಶಿವಾಜಿ ಎನ್ ಬಾಲೇಶಗೋಳ




