ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀಧರೇಶ್ವರ ಜಕ್ಕಮ್ಮಾದೇವಿ ಜಾತ್ರಾ ಮಹೋತ್ಸವ ಏಪ್ರಿಲ್ 6 ರಿಂದ 8 ರವರೆಗೆ ಅದ್ದೂರಿಯಾಗಿ ಮಾಡುತ್ತಿದ್ದಾರೆ.
ಜಾತ್ರಾ ಮಹೋತ್ಸವಕ್ಕೆ ಸುಮಾರು ನೂರು ಪಲ್ಲಕ್ಕಿಗಳು ಆಗಮಿಸುತ್ತಿದ್ದಾವೆ. ಎರಡು ದಿನಗಳ ಕಾಲ ಮಹಾಪ್ರಸಾದ್ ವ್ಯವಸ್ಥೆ ಇರುತ್ತದೆ. ಜಾತ್ರೆ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು, ಗಣ್ಯ ವ್ಯಕ್ತಿಗಳು, ಕಲಾವಿದರು, ರೈತ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ ಎಂದು ಪರಮಪೂಜ್ಯ ಭಂಡಾರದ ಒಡೆಯ ಶ್ರೀ.ಧರೆಶ್ವರ ಅಜ್ಜನ ಅವರು ಮಾಹಿತಿ ನೀಡಿದ್ದಾರೆ.
ಆದಕಾರಣ ಸರ್ವಭಕ್ತರಲ್ಲಿ ಸೂಚನೆ ಏನೆಂದರೆ ಈ ಶ್ರೀ ಧರೆಶ್ವರ ಜಕ್ಕಮ್ಮಾದೇವಿ ಜಾತ್ರೆಗೆ ಸರ್ವರು ಆಗಮಿಸಿ ಶೋಭೆ ತರಬೇಕಾಗಿ ವಿನಂತಿ.
ವರದಿ: ರಾಜು ಮುಂಡೆ