Ad imageAd image

ತಾಲ್ಲೂಕು ಆಡಳಿತದಿಂದ ಶ್ರೀ ಸಿದ್ದರಾಮೇಶ್ವರರರ 852 ನೇ ಜಯಂತಿ ಆಚರಣೆ/ ಶ್ರೀ ಗುರುಸಿದ್ದರಾಮೇಶ್ವರರು ಇಡೀ ದೇಶದ ಆಸ್ತಿ : ಕುಂಇ ಅಹಮದ್

Bharath Vaibhav
ತಾಲ್ಲೂಕು ಆಡಳಿತದಿಂದ ಶ್ರೀ ಸಿದ್ದರಾಮೇಶ್ವರರರ 852 ನೇ ಜಯಂತಿ ಆಚರಣೆ/ ಶ್ರೀ ಗುರುಸಿದ್ದರಾಮೇಶ್ವರರು ಇಡೀ ದೇಶದ ಆಸ್ತಿ : ಕುಂಇ ಅಹಮದ್
WhatsApp Group Join Now
Telegram Group Join Now

ತುರುವೇಕೆರೆ: ತಾಲ್ಲೂಕು ಆಡಳಿತ, ಬೋವಿ ಸಮಾಜ, ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಶ್ರೀ ಗುರು ಸಿದ್ದರಾಮೇಶ್ವರರ 852 ನೇ ಜಯಂತಿಯನ್ನು ಮಿನಿವಿಧಾನಸೌಧ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಶ್ರೀ ಗುರುಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಕುಂಇ ಅಹಮದ್, ಶ್ರೀ ಗುರುಸಿದ್ದರಾಮೇಶ್ವರರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೀಮಿತರಾದವರಲ್ಲ, ಶಿವಯೋಗಿಗಳು ಇಡೀ ದೇಶದ ಸರ್ವ ಜನಾಂಗದ ಆಸ್ತಿ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ ಅವರಿಗೆ ಈಶ್ವರನ ದರ್ಶನವಾಗಿ ಶಿವಯೋಗಿಗಳಾಗಿ ಅವತರಿಸಿ ವಚನ ಸಾಹಿತ್ಯದ ಮೂಲಕ ಜ್ಞಾನ ಸಂದೇಶವನ್ನು ಜಗತ್ತಿಗೆ ನೀಡಿದ ಮಹನೀಯರಾಗಿದ್ದಾರೆ ಎಂದರು.

ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನವನ್ನು ಅಲಂಕರಿಸಿ, ಬಸವಣ್ಣನವರನ್ನೇ ತಂದೆ, ತಾಯಿ, ಪರಮಬಂಧು ಎಂದು ವಚನದ ಮೂಲಕ ಸ್ಮರಿಸಿ, ಅಂದಿನ ಕಾಲದ ಜಾತಿ ವ್ಯವಸ್ಥೆಯ ವಿರುದ್ಧ ಸಮಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಚನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ನೀರಿನ ವ್ಯವಸ್ಥೆಯನ್ನು ಒದಗಿಸಿ ಜನಜಾನುವಾರುಗಳ ದಾಹವನ್ನು ತಣಿಸುವುದಕ್ಕಾಗಿ ತಮ್ಮ ಗ್ರಾಮದ ಸಂಚಾರದೆಲ್ಲಡೆ ವಡ್ಡುಗಳನ್ನು, ಕೆರೆಕಟ್ಟೆಗಳನ್ನು ನಿರ್ಮಿಸಿ ಸಾಮಾಜಿಕ ಕಳಕಳಿಯನ್ನು ಸಹ ಮೆರೆದಿದ್ದಾರೆ. ಇಂತಹ ಮಹಾನ್ ಶಿವಯೋಗಿಗಳ ಜನ್ಮಜಯಂತಿಯನ್ನು ಸಮಾಜದ ಎಲ್ಲರೂ ಒಗ್ಗೂಡಿ ಆಚರಿಸಬೇಕಿದೆ ಎಂದರು.

ಬೋವಿ ಸಮಾಜದ ಅಧ್ಯಕ್ಷ ಮಹಲಿಂಗಯ್ಯ ಮಾತನಾಡಿ, ಶ್ರೀ ಸಿದ್ದರಾಮೇಶ್ವರರಿಗೆ ಬಾಲ್ಯದಿಂದಲೂ ಆಧ್ಯಾತ್ಮಿಕ ತತ್ವ ವಿಚಾರಗಳಲ್ಲಿ ಅಪಾರವಾದ ನಂಬಿಕೆ ಮತ್ತು ಶ್ರದ್ಧೆಗಳಿದ್ದವು. ಅವರು ದನ ಕಾಯುವ ಕಾಯಕದಲ್ಲಿ ನಿರತರಾಗಿದ್ದ ಸಮಯದಲ್ಲಿ ಮಲ್ಲಯ್ಯನೆಂಬ ಜಂಗಮ ಅಂಬಲಿಯ ಭಿಕ್ಷೆಯನ್ನು ಬೇಡುತ್ತಾನೆ. ಅದನ್ನು ಮನೆಗೆ ಹೋಗಿ ತರುವಷ್ಟರಲ್ಲಿ ಆ ಜಂಗಮ ಅಲ್ಲಿಂದ ಕಣ್ಮರೆಯಾಗಿರುತ್ತಾನೆ. ಎಲ್ಲೆಡೆ ಹುಡುಕಿದರೂ ಆತ ಸಿಗುವುದಿಲ್ಲ. ಅಲ್ಲಿನ ಭಕ್ತ ಸಮೂಹ ಶ್ರೀಶೈಲಗಿರಿಯಲ್ಲಿ ಮಲ್ಲಯ್ಯನಿದ್ದಾನೆಂದು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಶ್ರೀಶೈಲದಲ್ಲಿನ ಸ್ಥಾವರ ಲಿಂಗವನ್ನು ತೋರಿಸಿ, ಇದುವೇ ಮಲ್ಲಯ್ಯ ಎನ್ನುತ್ತಾರೆ, ಇದನ್ನು ಒಪ್ಪದ ಸಿದ್ದರಾಮರು ಓರ್ವ ಜಂಗಮನಿಗೆ ಅನ್ನ ನೀಡಲು ಸಾಧ್ಯವಾಗಲಿಲ್ಲ ಎಂದು ನೊಂದು ಇಹಲೋಕ ತ್ಯಜಿಸುವ ನಿರ್ಧಾರ ಮಾಡುತ್ತಾರೆ. ಆಗ ಮಲ್ಲಯ್ಯನೆಂಬ ಜಂಗಮರ ಸಾಕ್ಷಾತ್ಕಾರವಾಗಿ ಭಕ್ತಿಯ ನೈಜ ಪಥವನ್ನು ಅರ್ಥೈಯಿಸಿಕೊಳ್ಳುತ್ತಾರೆ. ನಂತರ ಜಂಗಮಮುಖಿ ಕಾರ್ಯದಲ್ಲಿ ನಿರತರಾಗಿ ನೂರಾರು ಕೆರೆ ಬಾವಿ, ದೇವಸ್ಥಾನ ಮತ್ತು ನಿರಾಶ್ರಿತರಿಗೆ ಆಶ್ರಮಗಳನ್ನು ನಿರ್ಮಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಭೋವಿ ಜನಾಂಗದ ಕ್ಷೇಮಾಭಿವೃದ್ದಿ ಸಂಗದ ವತಿಯಿಂದ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ಶಿವಲಿಂಗಪ್ಪ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಬಿಸಿಎಂ ಇಲಾಖೆಯ ಬಸವರಾಜ್, ಆಹಾರ ಇಲಾಖೆಯ ಕೃಷ್ಣೇಗೌಡ, ಆರೋಗ್ಯ ಇಲಾಖೆಯ ಬೋರೇಗೌಡ, ಮುಖಂಡರಾದ ಅನಿತಾನಂಜುಂಡಯ್ಯ, ರಕ್ಷಿತ್, ಶಿವರಾಜ್, ಬಸವರಾಜಪ್ಪ, ತಿರುಮಲಯ್ಯ, ಮಂಜುನಾಥ್, ಸುರೇಶ್, ನಾಗಪ್ಪ, ರಾಜಣ್ಣ, ರಾಮಣ್ಣ, ಸಂಘಟನೆಯ ವೆಂಕಟೇಶ್ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!