ಸಿಂಧನೂರು : ಜ, 21 ನಗರದ ತಹಸಿಲ್ ಕಛೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ 905 ನೇ ಜಯಂತಿ ಕಾರ್ಯಕ್ರಮವನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ಗಣ್ಯರು ಮಾತನಾಡಿ ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರು ಉಳಿದೆಲ್ಲ ವಚನಕಾರರ ಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇರುವಂತಹ ವೃತ್ತಿಯಿಂದ ಅಂದಿನ ಪ್ರವೃತ್ತಿಯಲ್ಲಿ ಅನುಭವಿ ನೇರ ನಿರ್ಭಿತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವರು ನನ್ನ ಕಾರ್ಯ ಅಥವಾ ವ್ಯಕ್ತಿ ನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳು ಅಂಕಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವನಗೌಡ ಗೊರೆಬಾಳ, ಆರ್ ಡಿ ಸಿ ಸಿ. ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡ ಪಂಪನಗೌಡ ಬಾದರ್ಲಿ, ಕರಿಯಪ್ಪ ಅಧ್ಯಕ್ಷರು ಬಸವ ಕೇಂದ್ರ, ಜೆಡಿಎಸ್ ಮುಖಂಡ ಅಲ್ಲಮಪ್ರಭು ಪೂಜಾರಿ, ಹೆಚ್ ಎನ್. ಬಡಿಗೇರ್, ಮರಿಯಪ್ಪ ಬಿಎಸ್‍ಪಿ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ ಸಮುದಾಯದ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು
ವರದಿ :ಬಸವರಾಜ ಬುಕ್ಕನಹಟ್ಟಿ




