ಹುಮನಾಬಾದ:-ಡಿಸೇಂಬರ್ 1ರಂದು ಹುಮನಾಬಾದ ಪಟ್ಟಣದ ತೇರು ಮೈದಾನದಲ್ಲಿ ಭಕ್ತ ಕನಕದಾಸರ ಜಯಂತಿ ಅದ್ದೂರಿಯಾಗಿ ಅತೀ ಉತ್ಸಾಹದಿಂದ ಆಚರಣೆ ಮಾಡುವ ಭರವಸೆಯನ್ನು ಹೊಂದಲಾಗಿದೆ ಎಂದು ಗೊಂಡ ಸಮಾಜ ಮುಖಂಡ ಶಿವರಾಜ್ ಚಿನಕೇರಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಘೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಕುಲಭೇದ ಎನ್ನದೆ ಎಲ್ಲರನ್ನು ಸಮಾನವಾಗಿ ಕಾಣಿದ ಶ್ರೇಷ್ಠ ಕನಕದಾಸ ಜಯಂತಿ ಜಾತಿ ಭೇದ ಮರೆತು ಒಟ್ಟಾಗಿ ಆಚರಿಸೋಣ ಎಂದು ಹೇಳಿದರು.
ಬಳಿಕ ಪ್ರಕಾಶ ಕಾಡಗೊಂಡ ಮಾತಾಡಿ,ಪಕ್ಷಭೇದ ಜಾತಿಭೇದ ಮರೆತು ಒಂದಾಗಿ ಒಗ್ಗಟಾಗಿ ಬಂದು ಜಯಂತಿಯಲ್ಲಿ ಭಾಗವಹಿಸಲು ಕರೆ ನೀಡಿದರು.ಈ ಸಂದರ್ಭದಲ್ಲಿ ವಿನಾಯಕ ಮಣಕೊಜಿ, ಅಶೋಕ ಚಾಳಕಪುರೆ,ಅಶೋಕ ಸೊಂಡೆ,ಖಂಡಪ್ಪ, ಪಂಡಿತ,ಮಲ್ಲಿಕಾರ್ಜುನ ಸೇರಿ ಇತರರು ಇದ್ದರು.
ವರದಿ:-ಸಜೀಶ