Ad imageAd image

ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಅವರ ಸ್ವಗ್ರಹದಲ್ಲಿ ಸೃಷ್ಟಿ ಕರ್ತ ವಿಶ್ವಕರ್ಮ ಜಯಂತಿ ಆಚರಣೆ

Bharath Vaibhav
ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಅವರ ಸ್ವಗ್ರಹದಲ್ಲಿ ಸೃಷ್ಟಿ ಕರ್ತ ವಿಶ್ವಕರ್ಮ ಜಯಂತಿ ಆಚರಣೆ
WhatsApp Group Join Now
Telegram Group Join Now

ಬೆಂಗಳೂರು: -ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ರಮೇಶ್ ರಸ್ತೆಯಲ್ಲಿರುವ ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ವಿಶ್ವಕರ್ಮ ನಿಗಮ ಮಂಡಳಿಯ ಮಾಜಿ ಸದಸ್ಯಹಾಗೂ ವಿಶ್ವಕರ್ಮ ಸಮಾಜದ ಮುಖಂಡ ರಾಮಚಂದ್ರ ವಿಶ್ವಕರ್ಮ ಅವರ ಧರ್ಮ ಪತ್ನಿ ಶ್ರೀಮತಿ ಪುಷ್ಪಾ ರಾಮಚಂದ್ರ ಹಾಗೂ ಸುಪುತ್ರರಾದ ಹರ್ಷ, ಶಶಾಂತ, ಮಗಳು ರಕ್ಷಿತಾ ಇವರುಗಳ ನೇತೃತ್ವದಲ್ಲಿ ವಿರಾಟ್ ವಿಶ್ವಕರ್ಮ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಭಕ್ತಿ ಭಾವದಿಂದ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಮಹಾ ಮಂಗಳಾರತಿ ಜರುಗಿದವು. ನಂತರ ತೀರ್ಥ ಪ್ರಸಾದ ಮತ್ತು ಪ್ರೀತಿಯ ಭೋಜನ ಸ್ವೀಕರಿಸಿದರು.

ವಿಶ್ವಕರ್ಮ ಜಯಂತಿಯ ಅಂಗವಾಗಿ ಸೃಷ್ಟಿ ಕರ್ತ ವಿಶ್ವಕರ್ಮ ಪೂಜೆಯನ್ನು ಶ್ರೀ ಕಾಳಿಕಾ ದೇವಸ್ಥಾನ ಪ್ರದಾನ ಅರ್ಚಕರಾದ ಪೂಜ್ಯ ಶ್ರೀ ನಂಜುಂಡಸ್ವಾಮಿ ಅವರು ಶಾಸ್ತ್ರೋಕ್ತವಾಗಿ ರಾಮಚಂದ್ರ ಪುಷ್ಪಾ ದಂಪತಿಗಳು ನಡೆಸಿ ಕೊಟ್ಟರು.ವಿಶ್ವಕರ್ಮ ಸಮಾಜದ ಮುಖಂಡ ರಾಮಚಂದ್ರ ವಿಶ್ವಕರ್ಮ ಅವರ ಧರ್ಮ ಪತ್ನಿ ಶ್ರೀಮತಿ ಪುಷ್ಪಾ ರಾಮಚಂದ್ರ ಸರ್ವರಿಗೂ ಸ್ವಾಗತಿಸಿದರು.

ಐದು ಸಾವಿರ ವರ್ಷಗಳ ಇತಿಹಾಸ ಉಳ್ಳುವ ವಿಶ್ವಕರ್ಮ ಸಮಾಜ ಈ ಸಮಾಜವು ರಾಜಕೀಯ, ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಎಲ್ಲಾ ರಂಗದಲ್ಲಿ ಹಿಂದುಳಿದ ಸಮಾಜ ಎಂದರೆ ತಪ್ಪಾಗಲಾರದು ಎಂದು ವಿಶ್ವಕರ್ಮ ಸಮಾಜದ ಪ್ರಭಾವಿ ಮುಖಂಡ ಭಾಸ್ಕರ್ ಆಚಾರಿ ಹೇಳಿದರು.
ಅವರು ವಿಶ್ವಕರ್ಮ ಸಮಾಜ ಮುಖಂಡ ಹಾಗೂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಾಮಚಂದ್ರ ವಿಶ್ವಕರ್ಮ ಮನೆಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ವಿಶ್ವಕರ್ಮ ದರ್ಶನ ಪಡೆದು ವಿಶ್ವಕರ್ಮ ಜನರು ಎಲ್ಲಾ ಕಲೆಗಳ ಮುಖ್ಯವಾಗಿವೆ ಎಂದು ವಿಶ್ವಕರ್ಮರನ್ನು ಉದ್ದೇಶಿಸಿ ಭಾಸ್ಕರ್ ಆಚಾರಿ ಮಾತಾಡಿದರು.

ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಸಮಾಜದ ಪ್ರಭಾವಿ ನಾಯಕ ಭಾಸ್ಕರ್ ಆಚಾರಿ, ಮೃತುಂಜಯ್ಯ ಗೌಡ್ರು, ಕಾಳಿಕಾಂಬ ವುಡ್ ವರ್ಕ್ಸ್ ಮಾಲೀಕ ಮಹೇಶ್, ರಮೇಶ್ ವಿ, ಕುಮಾರ್,ಮಂಜು, ಧನಂಜಯ್, ಜಯರಾಂ, ಪನ್ನಾಗರಾಜು ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಮಹಿಳೆಯರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!