ಸಿರುಗುಪ್ಪ :– ನಗರದ ದೇಶನೂರು ರಸ್ತೆಯಲ್ಲಿರುವ ಶ್ರೀ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕಾಡಳಿತ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಸಹಯೋಗದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಕಥಾ ಪುರಾಣಗಳಲ್ಲಿ ತಿಳಿದು ಬಂದಂತೆ ಪಂಚ ಕರ್ಮಯೋಗಿಯಾಗಿದ್ದಾರೆ.ಎಲ್ಲಾ ಜನಾಂಗದವರ ಮನೆಗಳಿಗೆ ಬೇಕಾದ ಬಾಗಿಲು, ಕಿಟಕಿ, ಇನ್ನಿತರ ಪೀಠೋಪಕರಣಗಳನ್ನು ಪೂರೈಸುವ ಸಮುದಾಯದ ಕುಲದೇವರಾಗಿದ್ದು, ನಾವೆಲ್ಲಾ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಬಿ.ಎಮ್.ಸತೀಶ್ ಅವರು ಮಾತನಾಡಿ ಅಂದಿನ ಕಾಲದಲ್ಲಿ ಎಲ್ಲಾ ಜನಾಂಗದವರು ಸಮಾಜದಲ್ಲಿನ ಅವಶ್ಯಕತೆಗಳನ್ನು ಪೂರೈಸುವ ತಮ್ಮ ವೃತ್ತಿಗಳಿಂದ ಬಿಂಬಿಸಿಕೊಂಡಿದ್ದರೂ ಸಹ ಶಾಂತಿ ಸಹಭಾಳ್ವೆಗೆ ಹೆಸರುವಾಸಿಯಾಗಿದ್ದರು.
ನಾವು ಸಹ ಇಂದಿನ ನಮ್ಮ ಜೀವನದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋಗುವುದರೊಂದಿಗೆ ಶಾಂತಿ ಸಾಮರಸ್ಯದಿಂದ ಬಾಳೋಣವೆಂದು ತಿಳಿಸಿದರು.ರಾಜಬೀದಿಯಲ್ಲಿ ಶ್ರೀ ವಿಶ್ವಕರ್ಮ ಅವರ ಬೃಹತ್ ಭಾವಚಿತ್ರದ ಮೆರವಣಿಗೆ ನಡೆಯಿತು.
ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪವನ್‌ಕುಮಾರ್.ಎಸ್.ದಂಡಪ್ಪನವರ್, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎ.ಗಾದಿಲಿಂಗಪ್ಪ, ನಗರಸಭೆ ಆಯುಕ್ತ ಹೆಚ್.ಎನ್.ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ, ಉಪಾಧ್ಯಕ್ಷೆ ಯಶೋದಾ ಮೂರ್ತಿ, ಹಾಗೂ ಮುಖಂಡರಾದ ವೆಂಕಟರಾಮರೆಡ್ಡಿ, ಬಿ.ವೆಂಕಟೇಶ, ಸಮಾಜದ ಹಿರಿಯ ಮುಖಂಡರು ಹಾಜರಿದ್ದರು.
ವರದಿ :- ಶ್ರೀನಿವಾಸ ನಾಯ್ಕ