ಮಲ್ಲಮ್ಮನ ಬೆಳವಡಿ: 2025-26 ನೇ ಸಾಲಿನ ಬೆಳವಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ 4*400 ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದೆ ಹಾಗೂ ಬಾಲಕಿಯರ 4*100 ರಿಲೇ ದ್ವಿತೀಯ ಸ್ಥಾನ, ಬಾಲಕರ ಖೋ ಖೋ ದ್ವಿತೀಯ ಸ್ಥಾನ ಪಡೆದು ಬಾಲಕರ ಸಮಗ್ರ ವೀರಾಗ್ರಣಿ ಶಾಲೆ ಪ್ರಶಸ್ತಿಯನ್ನು ಬಾಚಿಕೊಂಡಿದೆ.
17 ವರ್ಷದ ಬಾಲಕರ ವಿಭಾಗದಲ್ಲಿ ಕಲ್ಮೇಶ ಗುಡ್ಡದ 400 ಮೀ ಓಟ, 3000 ಮೀ ಓಟ, ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ ಮುತ್ತುರಾಜ ಜೋಗಿಗುಡ್ಡ 800 ಮಿ ಓಟ, 1500 ಮೀ ಓಟ, 110 ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬಾಲಕರ ವೈಯಕ್ತಿಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಈಶ್ವರ ಅಂಗಡಿ ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 800 ಮೀ ಓಟದಲ್ಲಿ ದ್ವಿತೀಯ, ಸುದರ್ಶನ ಸೊಗಲದ 3000 ಮೀ ಓಟದಲ್ಲಿ ದ್ವಿತೀಯ, 110 ಮೀ ಅಡೆತಡೆ ಓಟದಲ್ಲಿ ದ್ವಿತೀಯ, ಬಸವರಾಜ ಯರಗೊಪ್ಪ 5 ಕಿ ಮೀ ನಡಿಗೆಯಲ್ಲಿ ತೃತೀಯ, ಹರೀಶ ಗರಗದ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಲಕ್ಷ್ಮೀ ಶಿಗೀಹಳ್ಳಿ 1500 ಮೀ ಓಟದಲ್ಲಿ ಪ್ರಥಮ ಹಾಗೂ 100 ಮೀ ಅಡೆತಡೆ ಓಟದಲ್ಲಿ ಪ್ರಥಮ, ಸೀಮಾ ಹೊಸೂರ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾವೇರಿ ಜಡಗನ್ನವರ 3000 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.
14 ವರ್ಷದ ಬಾಲಕರ ವಿಭಾಗದಲ್ಲಿ ಬಸವರಾಜ ಕುರಿ 200 ಮೀ ಓಟ, 600 ಮೀ ಓಟದಲ್ಲಿ ಪ್ರಥಮ, ಸಂತೋಷ ಬೋಬಡೆ 400 ಮೀ ಓಟದಲ್ಲಿ ಪ್ರಥಮ ಹಾಗೂ 80 ಮೀ ಅಡೆತಡೆ ಓಟದಲ್ಲಿ ಪ್ರಥಮ, ಭಾಸ್ಕರ ಹುದ್ದಾರ 100 ಮೀ ಓಟದಲ್ಲಿ ಪ್ರಥಮ ಹಾಗು 4*100 ಮೀ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 14 ವರ್ಷದ ಬಾಲಕಿಯರ ವಿಭಾಗದಲ್ಲಿ ಅಪೂರ್ವಾ ಕುಲಕರ್ಣಿ 100 ಮೀ ಓಟದಲ್ಲಿ ಪ್ರಥಮ, ಪಂಕಜಾ ಸೂರ್ಯವಂಶಿ 80 ಮೀ ಅಡೆತಡೆ ಓಟದಲ್ಲಿ ಪ್ರಥಮ, ಸವಿತಾ ಕುರಿ 400 ಮೀ ಓಟದಲ್ಲಿ ದ್ವಿತೀಯ, ಬಸಮ್ಮ ಕಂಬಳಿ 600 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಮುಖ್ಯ ಶಿಕ್ಷಕರಾದ ಶ್ರೀ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಶ್ರೀ ಜೆ.ಆರ್.ನರಿ, ಎಸ್.ವಿ.ಬಳಿಗಾರ, ಎಚ್.ವಿ.ಪುರಾಣಿಕ, ಎಮ್.ಎನ್.ಕಾಳೆ, ವೀರೇಂದ್ರ ಪಾಟೀಲ, ಸಂತೋಷ ಸಾಳುಂಕೆ, ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.
ವರದಿ: ದುಂಡಪ್ಪ ಹೂಲಿ




