Ad imageAd image

ಬ್ಯಾಂಕ್ ಖಾತೆದಾರರು 4 ನಾಮಿನಿಗಳನ್ನು ಹೊಂದಲು ಅವಕಾಶ : ಕೇಂದ್ರ ಸರ್ಕಾರ

Bharath Vaibhav
ಬ್ಯಾಂಕ್ ಖಾತೆದಾರರು 4 ನಾಮಿನಿಗಳನ್ನು ಹೊಂದಲು ಅವಕಾಶ : ಕೇಂದ್ರ ಸರ್ಕಾರ
WhatsApp Group Join Now
Telegram Group Join Now

ನವದೆಹಲಿ: ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳಲ್ಲಿ 4 ನಾಮಿನಿಗಳನ್ನು ಹೊಂದಲು ಅವಕಾಶ ಕಲ್ಪಿಸುವ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ -2024 ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರವಾಗಿದೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಾಯೋಗಿಕವಾಗಿ ಮಂಡಿಸಿದ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಬಿಲ್ ಮೇಲಿನ ಚರ್ಚೆಗೆ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್ ಠೇವಣಿದಾರರಿಗೆ ಉತ್ತರಾಧಿಕಾರತ್ವ ಅಥವಾ ಏಕಕಾಲಿಕ ನಾಮನಿರ್ದೇಶನ ಸೌಲಭ್ಯದ ಆಯ್ಕೆ ಇರಲಿದೆ ಎಂದು ತಿಳಿಸಿದ್ದಾರೆ.

ಲಾಕರ್ ಹೊಂದಿದವರು ಉತ್ತರಾಧಿಕಾರ ನಾಮನಿರ್ದೇಶನವನ್ನು ಮಾತ್ರ ಹೊಂದಿರುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಈ ಮಸೂದೆ ಅಂಗೀಕಾರದಿಂದ ಸಹಕಾರಿ ಬ್ಯಾಂಕುಗಳಲ್ಲಿನ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮತ್ತು ಪೂರ್ಣಾವಧಿಯ ನಿರ್ದೇಶಕರನ್ನು ಹೊರತುಪಡಿಸಿದ ನಿರ್ದೇಶಕರ ಅವಧಿ 8 ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಾಗಲಿದೆ.

ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಮತ್ತು ರಾಜ್ಯ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!