ಗುರುಮಠಕಲ್ : ಗುರುಮಾಠಕಲ್ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಜರಾಕೋಟ ಗ್ರಾಮದಲ್ಲಿ ಶತಮಾನದ ಹಳೆಯ ಖಬರ್‌ಸ್ತಾನ್ ಹಾಗೂ ದರ್ಗಾ ಧಾರ್ಮಿಕ ಸ್ಮಾರಕವನ್ನು ಧ್ವಂಸಗೊಳಿಸಲು ಯತ್ನಿಸಿರುವ ಗಂಭೀರ ಘಟನೆ ವರದಿಯಾಗಿದೆ.
ರವಿವಾರದಂದು ಚಾಂದ್ ಸಾಬ್ ಎಂಬ ವ್ಯಕ್ತಿ,ರಾಂಪುರ ಗ್ರಾಮದ ಜೆಸಿಪಿ ಬಳಸಿ, ಧಾರ್ಮಿಕ ಸ್ಥಳವನ್ನು ಕೆಡವಲು ಯತ್ನಿಸಿದ್ದಾನೆ ಎಂದು ಸ್ಥಳೀಯ ಮುಸ್ಲಿಂ ಸಮುದಾಯದವರು ತಿಳಿಸಿದ್ದಾರೆ.
ಈ ಘಟನೆಯು ಗ್ರಾಮದಲ್ಲಿ ಶಾಂತಿ-ಸೌಹಾರ್ದ್ಯಕ್ಕೆ ಭಂಗ ಉಂಟುಮಾಡುವ ಕೃತ್ಯವಾಗಿದೆ. ಸ್ಥಳೀಯ ಮುಸ್ಲಿಂ ಸಮುದಾಯದ ಜನತೆ ತಕ್ಷಣ ತಡೆಹಿಡಿದ ಕಾರಣದಿಂದಾಗಿ, ಆಕ್ರಮಣಕಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈಗಾಗಲೇ ಗ್ರಾಮಸ್ಥರು ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಶೀಘ್ರ ಕ್ರಮದ ಕುರಿತ ಮನವಿ ಸಲ್ಲಿಸಿದ್ದಾರೆ.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷರು ಶ್ರೀ ಕೆ.ಬಿ. ವಾಸು ಅವರು ಕೂಡ ಈ ಪ್ರಕರಣವನ್ನು ಖಂಡಿಸಿ, ಜವಾಬ್ದಾರಿ ವಹಿಸುವ ಅಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಧಾರ್ಮಿಕ ಸ್ಥಳಗಳ ರಕ್ಷಣೆ ಹಾಗೂ ಶಾಂತಿ-ಸೌಹಾರ್ದ್ಯ ಕಾಯ್ದುಕೊಳ್ಳಲು ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂದು ಸಾರ್ವಜನಿಕವಾಗಿ ಮನವಿ ಮಾಡಿದರು.
ವರದಿ : ರವಿ ಬುರನೋಳ್




