ಚಾಲುಕ್ಯೋತ್ಸವ ಆಚರಣೆಗೆ ಹೆಚ್ಚಿದ ಒತ್ತಡಕ್ಕೆ ತೆರೆ, ಮಾರ್ಚ ಮೊದಲ ವಾರದಲ್ಲಿ ಚಾಲುಕ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ ನಡೆಸಿದ ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ.
ಬಹು ವರ್ಷಗಳಿಂದ ನೆನೆಗುದಿಗೆ ಬೀಳುತ್ತಲೇ ಸಾಗಿದ್ದ ದಕ್ಷಿಣಾಪಥೇಶ್ವರ ಬಿರುದಾoಕಿತ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಆಳಿದ ಗಂಡುಮೆಟ್ಟಿನ ನಾಡು ಚಾಲುಕ್ಯರಾಳಿದ ಬೀಡು ಬಾದಾಮಿಯಲ್ಲಿ ಚಾಲುಕ್ಯೋತ್ಸವ ಆಚರಣೆ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
ಸಾಕಷ್ಟು ಜನ ಚಾಲುಕ್ಯೋತ್ಸವ ಆಚರಣೆ ಆಗಬೇಕು ಎಂದು ಒತ್ತಾಯ ಹೆಚ್ಚಿ ಕೊನೆಗೆ ಚಾಲುಕ್ಯೋತ್ಸವ ಆಚರಣೆಯನ್ನು ಮಾರ್ಚ್ ಮೊದಲ ವಾರದಲ್ಲಿ ನಡೆಸಲು ಬಾದಾಮಿ ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆಯಿತು. ಸಾಹಿತಿಗಳು ಚಿಂತಕರು, ಇತಿಹಾಸಕಾರರು ಪತ್ರಕರ್ತರು, ತಾಲೂಕಿನ ಅನೇಕ ಮುಖಂಡರು, ಕಲಾವಿದರ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಸಲಹೆ ಸೂಚನೆ ಗಳನ್ನು ನೀಡಿದರು.
ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಭೆಯಲ್ಲಿ ಮಾತನಾಡಿ ಚಾಲುಕ್ಯೋತ್ಸವ ಆಚರಣೆಯನ್ನು ನಮ್ಮೂರಿನ ಹಬ್ಬದ ಹಾಗೆ ಅದ್ದೂರಿಯಿಂದ ವಿಜೃಂಭನೆಯಿಂದ ಆಚರಿಸಲು ಕೆಲವು ಸಮಿತಿಗಳನ್ನು ರಚನೆ ಮಾಡಿ ಸಮಿತಿಗಳ ಸಲಹೆ ಸೂಚನೆಗಳನ್ನು ಆಧರಿಸಿ ತಂಡಗಳನ್ನು ರಚಿಸಿ ಚಾಲುಕ್ಯೋತ್ಸವವನ್ನು ಯಾವುದೇ ರೀತಿ ತೊಂದರೆಯಾಗದ ಹಾಗೆ ವ್ಯವಸ್ಥೆತವಾಗಿ ಆಚರಿಸಲು ಕೈ ಜೋಡಿಸಿ ಸ್ವ ಇಚ್ಛೆಯಿಂದ ಭಾಗವಹಿಸಿ ಎಂದು ಸಭೆಯಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಾದಾಮಿ ಮತಕ್ಷೇತ್ರದ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ತಾಲೂಕಾ ದಂಡಾಧಿಕಾರಿ( ತಹಶೀಸೀಲ್ದಾರ್ ) ಮಧುರಾಜ್, ಬಾದಾಮಿ ಪುರಸಭೆ ಅಧ್ಯಕ್ಷ ಪಾಂಡು ಕಟ್ಟಿಮನಿ, ಎಸ್. ವಿ. ಹಿರೇಮಠ, ಇ. ಓ. ಸುರೇಶ. ಕೋಕರೆ, ಬಾದಾಮಿ ಪಿ. ಎಸ್. ಐ. ವಿಠಲ್ ನಾಯಿಕ್, ಪ್ರವಾಸಿ ಮಾರ್ಗದರ್ಶಿ ಇಷ್ಟಲಿಂಗ್ ಶಿರ್ಸಿ, ಮಹಾಂತೇಶ್ ಹಟ್ಟಿ ಸೇರಿದಂತೆ ಇನ್ನೂ ಅನೇಕ ಮುಖಂಡರು, ತಾಲೂಕಿನ ವಿವಿಧ ಕ್ಷೇತ್ರದ ಮುಖಂಡರು ಮಹಿಳೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ