Ad imageAd image

ಚಾಂಪಿಯನ್ಸ್ ಟ್ರೋಫಿ ಫೈನಲ್ : ಭಾರತಕ್ಕೆ 252 ರನ್ ಗಳ ಗುರಿ

Bharath Vaibhav
ಚಾಂಪಿಯನ್ಸ್ ಟ್ರೋಫಿ ಫೈನಲ್ : ಭಾರತಕ್ಕೆ 252 ರನ್ ಗಳ ಗುರಿ
WhatsApp Group Join Now
Telegram Group Join Now

ದುಬೈ: ಭಾರತ ಕ್ರಿಕೆಟ್ ತಂಡವು ತನ್ನ ಸ್ಪಿನ್ ಬೌಲರುಗಳ ಸಾಂಘಿಕ ಉತ್ತಮ ಪ್ರದರ್ಶನದಿಂದ ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಲ್ಲಿ ಎದುರಾಳಿ ತಂಡವನ್ನು 7 ವಿಕೆಟ್ ಗೆ 251 ರನ್ ಗಳಿಗೆ ನಿಯಂತ್ರಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡಕ್ಕೆ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಉತ್ತಮ ಆರಂಭ ಒದಗಿಸಿದ್ದರು. ಆದರೆ ಈ ಇಬ್ಬರು ಒಬ್ಬರ ಹಿಂದೆ ಒಬ್ಬರಂತೆ ಬೇಗನೆ ವಿಕೆಟ್  ಒಪ್ಪಿಸಿದ್ದರಿಂದ ಕಿವೀಸ್ ಉತ್ತಮ ಆರಂಭದ ಲಾಭ ದೊರೆಯಲಿಲ್ಲ. ರಚಿನ್ ರವೀಂದ್ರ 29  ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರೆ, ಡೆರಿ ಮಿಚೆಲ್ ಹಾಗೂ ಮೈಕೆಲ್ ಬಾರ್ಸೆ ವೆಲ್ ಉತ್ತಮ ಅರ್ಧ ಶತಕ ಗಳಿಸಿ ತಂಡವನ್ನು ಮತ್ತಷ್ಟು ಕಠಿಣ ಪರಿಸ್ಥಿತಿಯಿಂದ ಪಾರು ಮಾಡಿದರು.

ಅಜೇಯರಾಗಿ ಉಳಿದ ಮೈಕೆಲ್ ಬಾರ್ಸೆ ವೆಲ್ 40 ಎಸೆತಗಳಲ್ಲಿ 3 2 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರೆ, ಡೇರಿ ಮಿಚೆಲ್ 101 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿದರು. ಭಾರತದ ಪರವಾಗಿ ಎಲ್ಲ ಸ್ಪಿನ್ ಬೌರಲುಗಳು ಕರಾರುವಕ್ಕಾದ ಬೌಲಿಂಗ್ ಸಾಧನೆ ತೋರಿದರು. ವರುಣ್ ಚರ್ಕವರ್ತಿ 45 ಕ್ಕೆ 2,  ಕುಲದೀಪ್ ಯಾದವ್ 40 ಕ್ಕೆ 2 ಹಾಗೂ ರವೀಂದ್ರ ಜಡೆಜಾ 30 ಕ್ಕೆ 1 ವಿಕೆಟ್  ಪಡೆದರು. ಇದರಿಂದ ನ್ಯೂಜಿಲೆಂಡ್  ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಗೆ 251 ರನ್ ಮಾತ್ರ ಗಳಿಸಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!