———————-ಮಹಾನ್ ನಾಯಕರ ಚಿತ್ರಪಟಗಳಿಗೆ ಅವಮಾನ: ಗ್ರಾಮಸ್ಥರ ಆರೋಪ
ಸೇಡಂ: ತಾಲೂಕಿನ ಚಂದಾಪುರ ಗ್ರಾಮ ಪಂಚಾಯಿತಿಯು ಅತ್ಯಂತ ಹಿಂದುಳಿದಿದ್ದಲ್ಲದೆ ಅಧಿಕಾರ ದುರುಪಯೋಗ ನಡೆಯುತ್ತಿರುವುದು ವಿಪರ್ಯಾಸವೇ ಎಂದು ಹೇಳಬಹುದು. ಮೂರು ವಾರಗಳಿಗೊಮ್ಮೆ ಪಂಚಾಯಿತಿ ಅಧಿಕಾರಿ ಕಾರ್ಯಾಲಯದಲ್ಲಿ ಲಭ್ಯ ಉಳಿದ ಸಮಯದಲ್ಲಿ ತಾನು ಎಲ್ಲಿರುತ್ತಾನೋ ಅವರಿಗೆ ಗೊತ್ತು ಎನ್ನುತ್ತಾರೆ ಗ್ರಾಮಸ್ಥರು.

ಬಂದ ಸಮಯದಲ್ಲಿ ಕೂಡ ಯಾವುದೇ ಕೆಲಸದ ಬಗ್ಗೆ ತನಗೆ ಗೊತ್ತಿಲ್ಲ ಎನ್ನುತ್ತಾರೆ. ಅಭಿವೃದ್ಧಿ ಕಾರ್ಯಗಳ ಕುರಿತು ನನ್ನನು ಕೇಳಬೇಡಿ ಎಲ್ಲಿ ದೂರು ನೀಡುತ್ತಾರೋ ನೀಡಲಿ ಎಂದು ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡುತ್ತಾನೆ ಪಿಡಿಒ ಭಗವಂತ ರಾಯ ಅವರು. ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಅಧಿಕಾರಿ ಭಗವಂತರಾಯ ಶಾಮೀಲಾಗಿ ಅನೇಕ ಬಿಲ್ ಗಳನ್ನು ಲೂಟಿ ಮಾಡಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಎದುರಲ್ಲೇ ಕಸದ ತಿಪ್ಪೆಯನ್ನು ಖಾಸಗಿ ವ್ಯಕ್ತಿಗಳು ಹಾಕಿರುತ್ತಾರೆ. ಸರಕಾರದ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳಿಗೆ ತಿಪ್ಪೆ ಹಾಕಲು ಅವಕಾಶವಿಲ್ಲ ಗ್ರಾಮಸ್ಥರು ಪ್ರಶ್ನೆ ಮಾಡಿದರೆ ಅವರನ್ನು ದಬ್ಬಾಳಿಕೆ ಮಾಡುತ್ತಾರೆ ಇಲ್ಲಿನ ಗ್ರಾಮ ಪಂಚಾಯತ್ ಅಧಿಕಾರಿ.
ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗೋಡೆ ಮೇಲಿರಬೇಕಾದ ಮಹಾನ್ ನಾಯಕರ ಚಿತ್ರಪಟಗಳು ಒಂದು ಮೂಲೆಗೆ ಕಸದ ರಾಶಿಯಂತೆ ಬಿದ್ದಿವೆ. ಅನೇಕ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಸ್ಥಳೀಯರು ಕೇಳಿಕೊಂಡರೆ ಯಾವುದೇ ಸಮಸ್ಯೆ ಬಗೆಹರಿಸದೆ ತನ್ನ ಮನಸಿಗೆ ಬಂದ ಹಾಗೆ ಕಾರ್ಯನಿರ್ವಹಿಸುತಿದ್ದಾನೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿಯಿಂದ ಗ್ರಾಮ ಪಂಚಾಯತ್ ಕಾರ್ಯಾಲಯವು ಹದಗೆಟ್ಟು ಮೇಲ್ಛಾವಣಿ ಬೀಳುವ ಸ್ಥಿತಿಯಲ್ಲಿದೆ. ಇಷ್ಟೆಲ್ಲಾ ಘಟನೆಗಳಿಗೆ ಕಾರಣವಾದ ಗ್ರಾಮ ಪಂಚಾಯಿತಿ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೂಡಲೇ ವಜಾಗೊಳಿಸಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




