ತುರುವೇಕೆರೆ: -ಪಟ್ಟಣದ 12 ನೇ ವಾರ್ಡ್ನಲ್ಲಿರುವ ಶ್ರೀ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದಲ್ಲಿ ಚಂಡಿಕಾಹೋಮ ಮತ್ತು ದುರ್ಗಾದೇವಿ ಹೋಮ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಸೆಪ್ಟಂಬರ್ 02 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಕೊಲ್ಲಾಪುರದಮ್ಮ ದೇವಿ, ಶ್ರೀ ಶನೇಶ್ಚರಸ್ವಾಮಿ, ಶ್ರೀ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಪಿರಿಯಾಪಟ್ಟಣದಮ್ಮ ದೇವಿಯನ್ನು ತಾಲ್ಲೂಕಿನ ಮಲ್ಲಾಘಟ್ಟ ಕೆರೆಯಲ್ಲಿ ಗಂಗಾಸ್ನಾನಕ್ಕೆ ಕರೆದೊಯ್ದು ಗಂಗಾಸ್ನಾನ, ಪುಣ್ಯಾಹ ಮಹಾಮಂಗಳಾರತಿ ನೆರವೇರಿಸಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪುರ ಪ್ರವೇಶಿಸಿ ದೇವಾಲಯಕ್ಕೆ ಕರೆತರಲಾಯಿತು. ನಂತರ ಪುಣ್ಯಾನಾಂದಿ, ನವಗ್ರಹ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಗಣಹೋಮ, ವಾಸ್ತುಹೋಮ, ಲಘು ಪೂರ್ಣಾಹುತಿ ನೆರವೇರಿಸಲಾಯಿತು.
ಪಿರಿಯಾಪಟ್ಟಣದಮ್ಮ ದೇವಿ ದೇವಸ್ಥಾನದ ಅರ್ಚಕರಾದ ರುದ್ರೇಶ್ ನೇತೃತ್ವದಲ್ಲಿ ಹೋಮ ಹಾಗೂ ಪೂಜೆಯ ಸಕಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸೆಪ್ಟಂಬರ್ 03 ರಂದು ಮಂಗಳವಾರ ನಡೆದ ದೇವರಿಗೆ ದೃಷ್ಟಿಪೂಜೆ, ಅಷ್ಟೋತ್ತರ, ಕುಂಕುಮಾರ್ಚನೆ, ದುರ್ಗಾಹೋಮ, ಜಯಾದಿಹೋಮ, ಚಂಡಿಕಾಹೋಮ ನಡೆಸಿ ಪೂರ್ಣಾಹುತಿ ನೆರವೇರಿಸಲಾಯಿತು. ಪೂಜೆ ಹಾಗೂ ಹೋಮದ ಸಂಪೂರ್ಣ ವೆಚ್ಚವನ್ನು ಇಂದಿರಾ ಪ್ರಭಾಕರ್, ಕೌಶಿಕ್ ಹಾಗೂ ಕಾವ್ಯಶ್ರೀ ಪ್ರದೀಪ್ ಕುಮಾರ್, ನಿಶ್ಮಿತ್, ನಿತ್ವಿಕ್ ಕುಟುಂಬ ವರ್ಗ ವಹಿಸಿತ್ತು. ದೇವಸ್ಥಾನ ಸೇವಾ ಸಮಿತಿ ಹಾಗೂ ಭಕ್ತಾಧಿಗಳಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ.ಜಿ.ನಾಗರಾಜ್, ಪಪಂ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಪಪಂ ಸದಸ್ಯರಾದ ಎನ್.ಆರ್.ಸುರೇಶ್, ಟಿ.ಕೆ.ಪ್ರಭಾಕರ್, ಪಪಂ ಮಾಜಿ ಸದಸ್ಯ ದಿವಾಕರ್, ಇನ್ನರ್ ವೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಸಮಿತಿಯ ಗೌರವಾಧ್ಯಕ್ಷ ಟಿ.ವೈ.ನಾಗರಾಜು, ಉಪಾಧ್ಯಕ್ಷರಾದ ಟಿ.ಆರ್.ಮಂಜುನಾಥ್, ಕಾರ್ಯದರ್ಶಿಗಳಾದ ವೆಂಕಟೇಶ್, ನರಸಿಂಹ, ಸಹಕಾರ್ಯದರ್ಶಿ ಟಿ.ಎನ್.ರಘು, ಖಜಾಂಚಿಗಳಾದ ಟಿ.ಎಸ್.ಪ್ರಭು, ಟಿ.ಆರ್.ಗಂಗಾಧರ್, ಟಿ.ಡಿ.ಸಂತೋಷ್, ಸಂಘಟನಾ ಕಾರ್ಯದರ್ಶಿಗಳಾದ ಟಿ.ಎನ್.ನವೀನ್ ಕುಮಾರ್, ಟಿ.ಕೆ.ನವೀನ್, ಮಹಿಳಾ ಕಾರ್ಯದರ್ಶಿ ಪಾರ್ವತಮ್ಮ, ಸಮಿತಿಯ ಮಾಜಿ ಅಧ್ಯಕ್ಷ ಟಿ.ಆರ್.ಶಂಕರಪ್ಪ, ಗಾರೆ ಸುರೇಶ್ ಸೇರಿದಂತೆ ನೂರಾರು ಮಂದಿ ನಾಗರೀಕರು, ದೇವಸ್ಥಾನದ ಭಕ್ತರು ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾದರು.
ವರದಿ: ಗಿರೀಶ್ ಕೆ ಭಟ್.