ವಿಜಯಪುರ : ಜಿಲ್ಲೆಯ ನಿಡುಗುಂದಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಚಂದ್ರಶೇಖರ ನುಗ್ಗಲಿ ಇವರ ಹುಟ್ಟು ಹಬ್ಬವನ್ನು ತಾಲೂಕು ಶಿಕ್ಷಕರ ಸಂಘ ನಿಡಗುಂದಿ, ಹಾಗೂ ಅವರ ಅಭಿಮಾನ ಬಳಗದವರು 42 ನೇ ಹುಟ್ಟುಹಬ್ಬವನ್ನು ಅವರ ಅನುಪ ಸ್ಥಿತಿಯಲ್ಲಿ ನಿಡುಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲವನ್ನು ವಿತರಿಸುವುದರ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎಂ. ಮುಲ್ಲಾ, ಮತನಾಡಿ ರಾಜ್ಯದ 1.80 ಲಕ್ಷ ಶಿಕ್ಷಕರ ಕಣ್ಮನಿ, ಅವರ ಸೇವಾ ಮನೋಭಾವ ಹಲವಾರು ಯುವಕರಿಗೆ ಪ್ರೇರಣೆ ಎಂದರು.
ಮಂದಿರ ಮಸೀದಿ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದೇವೆ.
ಅವರು ಶಿಕ್ಷಕರಿಗಾಗಿ ಶಿಕ್ಷಕರಿಗೋಸ್ಕರ ತಮ್ಮ ಜೀವ ಜೀವನ್ನೇ ಮುಡುಪಾಗಿಟ್ಟ ಧೀಮಂತ ನಾಯಕ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿ ಎಸ್ ಯಾರವಿತೇಲಿಮಠ, ಆರ್ ಎಸ್ ಕಮತ್, ವಿ ಕೆ ಮಸೂತಿ, ಆರ್ ಬಿ ಗೌಡರ್, ಆರ್, ಎ ನದಾಫ್, ಸಲೀಮ ದಡೇದ, ಚಂದ್ರಶೇಖರ್, ಆನಂದ ಗೌಡರ, ಮುತ್ತು ಸಂಗಪ್ಪ, ಪ್ರಕಾಶ್, ಶಿಕ್ಷಕರು ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಕಿರಿಯ ಹಾಗೂ ಹಿರಿಯ ವೈದ್ಯ ಅಧಿಕಾರಿಗಳು ಸಿಬ್ಬಂದಿ ವರ್ಗ, ಶಿಕ್ಷಕರು ಸೇರಿದಂತೆ ಊರ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಅಲಿ ಮಕಾನದಾರ




