ಬೆಳಗಾವಿ : ಬೆಳಗಾವಿಯ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆ ಕೇಸ್ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಪ್ರಕರಣದ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದು, ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲರ ಮೇಲೆ FIR ದಾಖಲಿಸಲಾಗಿದೆ.
ಬೆಳಗಾವಿಯ ಖಡೇ ಬಜಾರ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ FIR ದಾಖಲಾಗಿದೆ. ಸೂಸೈಡ್ ಮಾಡಿಕೊಂಡ ರುದ್ರಣ್ಣ ಆರೋಪಿಸಿದ್ದ ಮೂವರ ಮೇಲೆ ಪೊಲೀಸರು ಕೇಸ್ ಫೈಲ್ ಮಾಡಿಕೊಂಡಿದ್ದಾರೆ.
ಕಚೇರಿಯಲ್ಲಿ ವರ್ಗಾವಣೆ ವಿಚಾರವಾಗಿ ನಿರಂತರ ಕಿರುಕುಳ ಆರೋಪ ಕೇಳಿಬಂದಿತ್ತು. ರುದ್ರಣ್ಣ ತಾಯಿ ನೀಡಿರುವ ದೂರಿನಲ್ಲಿ ಈ ಬಗ್ಗೆ ಉಲ್ಲೇಖವಾಗಿತ್ತು.ಆದ್ರೆ, ಆರೋಪಿಗಳು ಮೊಬೈಲ್ ಸ್ವಿಚ್ ಆಗಿ ಪರಾರಿಯಾಗಿದ್ದಾರೆ. ಎಲ್ಲರಿಗಾಗಿ ತಲಾಶ್ ನಡೆದಿದ್ದು, ಪತ್ತೆಗೆ ಖಾಕಿ ಟೀಮ್ ಬಲೆ ಬೀಸಿದೆ.
ಮತ್ತೊಂದೆಡೆ, ಆತ್ಮಹತ್ಯೆ ಕೇಸ್ ತನಿಖಾಧಿಕಾರಿಗಳ ಬದಲಾವಣೆ ಆಗಿದೆ. ಖಡೇ ಬಜಾರ್ ಸಿಪಿಐ ಬದಲು ಎಸಿಪಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಶೀಘ್ರ ಪ್ರತ್ಯೇಕ ತನಿಖಾ ತಂಡ ರಚಿಸುವುದಾಗಿ ಕಮಿಷನರ್ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.