Ad imageAd image

ಡಾ. ಚನ್ನಮಲ್ಲ ಸ್ವಾಮೀಜಿ ಅವರಿಂದ ಆಶೀರ್ವಚನ

Bharath Vaibhav
ಡಾ. ಚನ್ನಮಲ್ಲ  ಸ್ವಾಮೀಜಿ ಅವರಿಂದ  ಆಶೀರ್ವಚನ
WhatsApp Group Join Now
Telegram Group Join Now

ಕಂದಗಲ್ಲ : ಯಾವದು ಬದಲಾಗುತ್ತ ಇರುತ್ತದೆಯೋ ಅದೇ ಜಗತ್ತು, ಜಗತ್ತು ಅಂದ್ರೆ ಬದಲಾಗೋದು ಈ ಕ್ಷಣ ಹೀಗೆ ಇರುವದಿಲ್ಲ ಮತ್ತೊಂದು ಕ್ಷಣಕ್ಕೆ ಬದಲಾಗುತ್ತದೆ ಹಾಗೆ ನಮ್ಮ ಮನದಲ್ಲಿ ಹುಟ್ಟುವ ಅನೇಕ ಭಾವನೆಗಳು ಶಾಶ್ವತವಾಗಿರುವದಿಲ್ಲ. ಸಮಯ ಸರಿದಂತೆ ಬದಲಾಗುತ್ತದೆ, ಸುಖದ ಭಾವವೇ ಇರಲಿ ದುಃಖದ ಭಾವವೇ ಇರಲಿ ಅವು ಪರಿವರ್ತನೆಯಾಗುತ್ತವೆ ಹಾಗೆಯೇ ಮನುಷ್ಯನಿಗೆ ಬರುವ ಕಷ್ಟಗಳು ಸಹ ಸರಿದು ಹೋಗುತ್ತವೆ ಅವು ಸರಿದು ಹೋದರೆ ಮಾತ್ರ ಇದಕ್ಕೆ ಬದುಕು ಎನ್ನುತ್ತಾರೆ ಬದುಕು ಮತ್ತು ಜಗತ್ತು ಸದಾ ಪರಿವರ್ತನೆಯಾಗುತ್ತವೆ ಎಂಬ ಸತ್ತ್ಯವನ್ನು ಎಲ್ಲರೂ ಅರ್ಥ ಮಾಡಿಕೊಂಡು ಮುನ್ನೆಡೆಯಬೇಕು ಎಂದು ಕನಕಗಿರಿ ಕಂದಗಲ್ಲ ಸುವರ್ಣಗಿರಿ ಮಠದ ಮ. ನಿ. ಪ್ರ ಡಾ. ಚನ್ನಮಲ್ಲ ಮಹಾಸ್ವಾಮಿಗಳವರು ಶ್ರೀ ರುದ್ರಸ್ವಾಮಿ ಮಹಿಳಾ ಅನುಭವ ಮಂಟಪದ ವತಿಯಿಂದ ನೆಡೆದ 42 ನೇ ಅನುಭಾವ ಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿದ್ಯಾ ಗುರುವಿನಮಠ್ ಪ್ರಾರ್ಥಿಸಿದರು, ವಿಜಯಲಕ್ಷ್ಮಿ ಹಡಪದ ಸ್ವಾಗತಿಸಿದರು, ಗೀತಾ ಭೋವಿ ವಂದಿಸಿದರು, ಶ್ವೇತಾ ಮೂಲಿಮಠ ಕಾರ್ಯಕ್ರಮ ನಿರೂಪಿಸಿದರು.

ತಾಯಂದಿರು, ಗ್ರಾಮಸ್ಥರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!